facebook pixel
chevron_right Top
transparent
ಪಟೇಲ್​ಗಿರಿ ಕುತೂಹಲ
ಯಗಟಿ ರಘು ನಾಡಿಗ್ ಬೆಂಗಳೂರು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ನಡುವಿನ ಹಗ್ಗಜಗ್ಗಾಟ ಬಹುತೇಕರ ಗಮನ ಸೆಳೆದಿರುವುದು ಖರೆ. ಈ ಕಸರತ್ತಿನ ಕೇಂದ್ರಬಿಂದುವಾಗಿರುವವರೇ ಆರ್​ಬಿಐ ಗವರ್ನರ್ ಉರ್ಜಿತ್ ಪಟೇಲ್. 2008-2014ರ ಕಾಲಾವಧಿಯಲ್ಲಿನ ಬೇಕಾಬಿಟ್ಟಿ ಸಾಲ ವಿತರಣೆಗೆ ಆರ್​ಬಿಐ ಕಡಿವಾಣ ಹಾಕದಿದ್ದ ಕಾರಣ ಬ್ಯಾಂಕಿಂಗ್ ವಲಯಕ್ಕೆ ಕೆಟ್ಟಕಾಲ ಬರುವಂತಾಗಿದೆ ಎಂದು ಆರೋಪಿಸಿದ ಸರ್ಕಾರ, ಬ್ಯಾಂಕಿಂಗೇತರ ಹಣಕಾಸು ವಲಯಕ್ಕೆ ಹಣಪೂರೈಕೆ, ಅನುತ್ಪಾದಕ ಸಾಲಗಳ ನಿರ್ವಹಣೆ, ಮಾರುಕಟ್ಟೆ ನಗದು ನಿರ್ವಹಣೆ ವಿಷಯದಲ್ಲೂ ಅಸಮಾಧಾನ ವ್ಯಕ್ತಪಡಿಸಿತು. ಮಾತ್ರವಲ್ಲ, ಸಾರ್ವಜನಿಕ ಹಿತರಕ್ಷಣೆಯ ಕಾರಣ ಮುಂದಿಟ್ಟುಕೊಂಡು, ಆರ್​ಬಿಐಗೆ ಪತ್ರಮುಖೇನ ನಿರ್ದೇಶನಗಳನ್ನು ನೀಡಲೆಂದು ಆರ್​ಬಿಐ ಕಾಯ್ದೆಯ ಪರಿಚ್ಛೇದ 7ನ್ನು ಅಸ್ತ್ರವಾಗಿ ಬಳಸಿಕೊಂಡಿತು.
For the best experience use Awesummly app on your Android phone
Awesummly Chrome Extension Awesummly Android App