facebook pixel
chevron_right Top
transparent
ಬಿಸಿಯೂಟದ ಮಕ್ಕಳಿಗೆ ವಾರಕ್ಕೊಮ್ಮೆ ತಿಥಿ ಊಟ
ಬೆಂಗಳೂರು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಜತೆಗೆ 'ತಿಥಿ ಊಟ' ಹಾಕಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅರ್ಥಾತ್, ತಿಥಿ ಭೋಜನ ಶೀರ್ಷಿಕೆಯಲ್ಲೇ ಯೋಜನೆ ಜಾರಿಗೊಳಿಸಬೇಕೆಂಬ ಕೇಂದ್ರ ಸರ್ಕಾರದ ಆದೇಶವೀಗ ಇಕ್ಕಟ್ಟು ಸೃಷ್ಟಿಸಿದೆ. 4 ವರ್ಷದ ನಂತರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್​ಆರ್​ಡಿ) 'ತಿಥಿ ಭೋಜನ' (ಸಮುದಾಯ ಭೋಜನ) ಹೆಸರಿನಲ್ಲೇ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರದ ಕಲ್ಪನೆ ಉತ್ತಮವಾಗಿದೆ. ಆದರೆ ಶೀರ್ಷಿಕೆ ಸಮಸ್ಯೆ ತಂದೊಡ್ಡಿದೆ. ತಿಥಿ ಎಂದರೆ ಹಿಂದಿಯಲ್ಲಿ ಒಳ್ಳೆಯ ಘಳಿಗೆ ಅಥವಾ ಸಮಯ. ಈ ಅರ್ಥವನ್ನೇ ಆಧರಿಸಿ ಯೋಜನೆಗೆ ತಿಥಿ ಭೋಜನ ಹೆಸರಿಡಲಾಗಿದೆ. ಆದರಿಲ್ಲಿ ತಿಥಿ ಎಂದರೆ ಮೃತಪಟ್ಟವರಿಗಾಗಿ ನಡೆಯುವ ಉತ್ತರ ಕ್ರಿಯೆ-ಕರ್ಮ. ಹೀಗಾಗಿ ತಿಥಿ ಹೆಸರಿನಲ್ಲಿ ಮಕ್ಕಳಿಗೆ ಭೋಜನ ಸೇವನೆ ಮಾಡುವುದು ಸಮಂಜಸವಲ್ಲ ಎಂದು ಬಹುತೇಕರ ವಿರೋಧವಿದೆ.
For the best experience use Awesummly app on your Android phone
Awesummly Chrome Extension Awesummly Android App