facebook pixel
chevron_right Entertainment
transparent
ವೆಬ್ ಸರಣಿಯತ್ತ ಪವನ್ ಗಮನ
ಕಳೆದೆರಡು ವರ್ಷಗಳಿಂದ ನಿರ್ದೇಶಕ ಪವನ್ ಕುಮಾರ್ 'ಯು ಟರ್ನ್' ತೆಲುಗು ರಿಮೇಕ್​ನಲ್ಲೇ ಬಿಜಿಯಾಗಿದ್ದರು. ಸಮಂತಾ ಮುಖ್ಯಭೂಮಿಕೆ ನಿಭಾಯಿಸಿದ್ದ ಆ ಚಿತ್ರ ಇತ್ತೀಚೆಗೆ ತೆರೆಕಂಡಿತ್ತು. ಅದಾದ ಬಳಿಕ ಪವನ್ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಎಂಬ ಬಗ್ಗೆ ಸಿನಿಪ್ರಿಯರ ವಲಯದಲ್ಲಿ ಕುತೂಹಲ ಮನೆ ಮಾಡಿತ್ತು. ಈಗ ಆ ಕುತೂಹಲಕ್ಕೆ ತೆರೆಬಿದ್ದಿದ್ದು, ಪವನ್ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ಅದು ಸಿನಿಮಾ ಅಲ್ಲ; ವೆಬ್ ಸೀರಿಸ್ ಎಂಬುದು ವಿಶೇಷ. ಇದೇ ಮೊದಲ ಬಾರಿಗೆ ವೆಬ್ ಸರಣಿ ಪ್ರಯತ್ನಕ್ಕೆ ಪವನ್ ಕೈ ಹಾಕಿದ್ದಾರೆ. 'ಲೈಲಾ' ಶೀರ್ಷಿಕೆಯ ಈ ಸರಣಿಯಲ್ಲಿ ಬಾಲಿವುಡ್ ನಟಿ ಹುಮಾ ಖುರೇಷಿ ನಟಿಸಲಿದ್ದಾರೆ. ಅಚ್ಚರಿ ಎಂದರೆ, ಪವನ್ ಜತೆಗೆ ಹಿರಿಯ ನಿರ್ದೇಶಕಿ ದೀಪಾ ಮೆಹ್ತಾ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಶಂಕರ್ ರಾಮನ್ ಕೂಡ 'ಲೈಲಾ'ಗೆ ಆಕ್ಷನ್-ಕಟ್ ಹೇಳಲಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App