facebook pixel
chevron_right Top
transparent
ದಿಲ್ಲಿಯಿಂದ ಕಂದಹಾರ್‌ಗೆ ಹೊರಟ ವಿಮಾನಕ್ಕೆ ಅಪಹರಣ ಭೀತಿ: ಆಗಿದ್ದೇನು?
ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಹರಣದ ವದಂತಿ ಕೆಲ ಕಾಲ ಆತಂಕ ಸೃಷ್ಟಿಸಿತು. ದಿಲ್ಲಿ ಮತ್ತು ಕಂದಹಾರ್ ನಡುವಣ ಏರಿಯಾನಾ ಅಫ್ಘಾನ್ ಏರ್‌ಲೈನ್‌ ವಿಮಾನದೊಳಗೆ ಪೈಲಟ್‌ ಅಚಾತುರ್ಯದಿಂದ ಹೈಜಾಕ್ ಗುಂಡಿ ಒತ್ತಿದ್ದೇ ಈ ಆತಂಕಕ್ಕೆ ಕಾರಣವಾಗಿತ್ತು. ತಕ್ಷಣವೇ ಭದ್ರತಾ ಸಿಬ್ಬಂದಿ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಒಯ್ದು ತಪಾಸಣೆ ನಡೆಸಿದರು. 'ಕಂದಹಾರ್‌ಗೆ ಹೊರಟಿದ್ದ ವಿಮಾನದ ಸಿಬ್ಬಂದಿ ಪ್ರಮಾದವಶಾತ್ ಹೈಜಾಕ್ ಗುಂಡಿ ಒತ್ತಿದ್ದರಿಂದ ಆತಂಕ ಉಂಟಾಯಿತು. ಕೂಡಲೇ ವಿಮಾನವನ್ನು ದೂರಕ್ಕೆ ಒಯ್ದು ತಪಾಸಣೆ ನಡೆಸಿದಾಗ ಸತ್ಯಾಂಶ ಬಯಲಾಯಿತು. ಕೊನೆಗೆ 3:30ಕ್ಕೆ ವಿಮಾನ ಪ್ರಯಾಣ ಬೆಳೆಸಿತು' ಎಂದು ಭದ್ರತಾ ಮೂಲಗಳು ತಿಳಿಸಿವೆ. ಅಲಾರಂ ಮೊಳಗಿದ ತಕ್ಷಣ ಏರ್‌ಪೋರ್ಟ್‌ ಭದ್ರತಾ ಸಿಬ್ಬಂದಿ ವಿಮಾನವನ್ನು ಸುತ್ತುವರಿದು ವಶಕ್ಕೆ ತೆಗೆದುಕೊಂಡರು. ಪೈಲಟ್‌ನ ಅಚಾತುರ್ಯದಿಂದ ಈ ಪ್ರಮಾದವಾಗಿದೆ.
For the best experience use Awesummly app on your Android phone
Awesummly Chrome Extension Awesummly Android App