facebook pixel
chevron_right Entertainment
transparent
ಇಟಲಿಗೆ ಹಾರಿದ ದೀಪಿಕಾ-ರಣವೀರ್​ ಜೋಡಿ
ಬಾಲಿವುಡ್​ನ ಚಾರ್ಮಿಂಗ್ ಜೋಡಿ ಅಂತಲೇ ಫೇಮಸ್​ ಆಗಿರುವ ದೀಪಿಕಾ ಪಡುಕೋಣೆ-ರಣವೀರ್​ ಸಿಂಗ್​ ಜೋಡಿ ಈಗ ನಿಜಜೀವನದಲ್ಲೂ ಜೋಡಿಯಾಗುವ ಘಳಿಗೆ ಬಂದೇ ಬಿಟ್ಟಿದ್ದು, ಹೊಸ ಬಾಳಿಗೆ ಕಾಲಿಡುವ ಹೊಸ್ತಿಲಲ್ಲಿರುವ ಈ ಜೋಡಿ ಇಂದು ಇಟಲಿಗೆ ಹಾರಿದೆ. ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್​ 12 ರಿಂದ ಮದುವೆ ಶಾಸ್ತ್ರಗಳು ಪ್ರಾರಂಭವಾಗಲಿದೆ. ಹಾಗಾಗಿ ಶನಿವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಇಟಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಾಲಿವುಡ್​ನ ಮೋಸ್ಟ್​ ಹ್ಯಾಪನಿಂಗ್​ ಜೋಡಿ ಎಂದೇ ಕರೆಯಲಾಗುವ ಇಬ್ಬರೂ ಬಿಳಿ ಬಣ್ಣದ ಡ್ರೆಸ್​ನಲ್ಲಿ ನಗುತ್ತಾ ಕೈ ಹಿಡಿದು ಸಾಗಿದರು. ನ.14ರಂದು ಕೊಂಕಣಿ ಶೈಲಿಯಲ್ಲಿ 15ರಂದು ಸಿಂಧಿ ಶೈಲಿಯಲ್ಲಿ ವಿವಾಹ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಈ ಜೋಡಿಯ ವಿವಾಹವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App