facebook pixel
chevron_right Top
transparent
ಉದ್ಧಟತನದ ಹೇಳಿಕೆ ನೀಡ್ತಿದ್ರೆ ನಾಲಿಗೆ ಸುಡಬೇಕಾಗುತ್ತೆ: ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಉದ್ಧಟತನದ ಹೇಳಿಕೆಗಳನ್ನು ನೀಡಿದರೆ ಅವರ ನಾಲಿಗೆಯನ್ನು ಸುಡಬೇಕಾಗುತ್ತೆ ಎಂದು ವಿಜಯಪುರ ಸಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಕಿಡಿ ಕಾರಿದ್ದಾರೆ. ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿ ಬಗ್ಗೆ ಮಾತನಾಡುವಾಗ ಎಚ್ಚರ ಇರಬೇಕು. ಹೇಳಿಕೆ ನೀಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು. ಹೇಗೆ ಬೇಕಾದರೂ ಮಾತನಾಡಿದರೆ ನಡೆಯುತ್ತೆ ಎಂದು ಭಾವಿಸಿದ್ದರೆ ಅವರಿಗಿಂತ ಮೂರ್ಖ ಮತ್ತೊಬ್ಬರಿಲ್ಲದಂತೆ. ಜಯಚಂದ್ರಗೆ ಬುದ್ಧಿ ಸರಿಯಿಲ್ಲ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು. ರಾಹುಲ್ ಗಾಂಧಿ ಕಾಂಗ್ರೆಸ್​ನ ಅಪ್ರಬುದ್ಧ ರಾಷ್ಟ್ರೀಯ ಅಧ್ಯಕ್ಷ. ಇನ್ನು ಆತನ ಹಿಂಬಾಲಕರು ಹೇಗಿರಬಹುದು ಎಂಬುದು ಜಯಚಂದ್ರರಂತಹವರ ಹೇಳಿಕೆ ಗಮನಿಸಿದರೆ ಅರ್ಥವಾಗುತ್ತದೆ. ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಚೋರ್ ಅಂತಾರೆ.
For the best experience use Awesummly app on your Android phone
Awesummly Chrome Extension Awesummly Android App