facebook pixel
chevron_right Top
transparent
ರಾಜ್ಯೋತ್ಸವ ಮಾಸದಲ್ಲೇ ಕನ್ನಡ ಸಿನಿಮಾಗೆ ಪ್ರೇಕ್ಷಕರ ಕೊರತೆ
ಬರಪೀಡಿತ ಜಿಲ್ಲೆಯಲ್ಲಿನ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬರ ಕಾಡುತ್ತಿದೆ. ಒಂದು ಪ್ರದರ್ಶನಕ್ಕೆ 600 ಆಸನಗಳ ಪೈಕಿ ಕೇವಲ 15 ಸೀಟುಗಳು ಭರ್ತಿಯಾಗುತ್ತಿದ್ದು, ಮಾಲೀಕರು ನಷ್ಟದ ಅಳಲು ತೋಡಿಕೊಳ್ಳುತ್ತಿದ್ದಾರೆ. ಕನ್ನಡಪರ ಸಂಘಟನೆಗಳ ಒತ್ತಾಯದ ಮೇರೆಗೆ ಜಿಲ್ಲೆಯ ಚಲನಚಿತ್ರ ಮಂದಿರದ ಮಾಲೀಕರಿಗೆ ಕಡ್ಡಾಯವಾಗಿ ನವೆಂಬರ್​ನಲ್ಲಿ ಕನ್ನಡ ಸಿನಿಮಾ ಪ್ರದರ್ಶಿಸಲು ಜಿಲ್ಲಾಡಳಿತ ಸೂಚಿಸಿದೆ. ಆದರೆ, ಕನ್ನಡ ಸಿನಿಮಾದ ಟಾಕೀಸುಗಳಿಗೆ ಪ್ರೇಕ್ಷಕರೇ ಬರುತ್ತಿಲ್ಲ. ಸಾಮಾನ್ಯವಾಗಿ ಚಲನಚಿತ್ರ ಮಂದಿರದಲ್ಲಿ ಪ್ರತಿದಿನ ಮಾರ್ನಿಂಗ್ ಶೋ, ಮ್ಯಾಟ್ನಿ, ಫಸ್ಟ್ ಮತ್ತು ಸೆಕೆಂಡ್ ಶೋ ಪ್ರದರ್ಶನಗಳು ನಡೆಯುತ್ತವೆ. ಚಲನಚಿತ್ರ ಮಂದಿರ ನಿರ್ವಹಣೆಗೆ ದಿನಕ್ಕೆ ಕನಿಷ್ಠ 12ರಿಂದ 13 ಸಾವಿರ ರೂಪಾಯಿ ಸಿಗಬೇಕು. ಇದರ ನಡುವೆ ಸ್ಯಾಟ್​ಲೈಟ್ ಶುಲ್ಕ ಮತ್ತು ಹಂಚಿಕೆದಾರರಿಂದ ಸಿನಿಮಾ ಖರೀದಿ ವೆಚ್ಚ ಬೇರೆ ಇರುತ್ತದೆ.
For the best experience use Awesummly app on your Android phone
Awesummly Chrome Extension Awesummly Android App