facebook pixel
chevron_right Top
transparent
ಆಗ್ರಾ ನಗರದ ಹೆಸರು ಬದಲಿಸುವಂತೆ ಯುಪಿ ಶಾಸಕ ಮನವಿ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಎರಡು ನಗರಗಳ ಹೆಸರನ್ನು ಬದಲಿಸಿದ ಬೆನ್ನಲ್ಲೇ ಜಗತ್​ಪ್ರಸಿದ್ಧ ಆಗ್ರಾ ನಗರದ ಹೆಸರನ್ನು ಬದಲಿಸುವಂತೆ ಬಿಜೆಪಿ ಶಾಸಕರೊಬ್ಬರು ಮನವಿ ಮಾಡಿದ್ದಾರೆ. ಆಗ್ರಾ ಉತ್ತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಜಗನ್​ ಪ್ರಸಾದ್​ ಗಾರ್ಗ್​ ಅವರು ಆಗ್ರಾ ಹೆಸರಿಗೆ ಯಾವುದೇ ಅರ್ಥವಿಲ್ಲ. ಈ ಪ್ರದೇಶದಲ್ಲಿ ಹೆಚ್ಚಾಗಿ ವನ್​ (ಅರಣ್ಯ) ಇದೆ ಮತ್ತು ಇಲ್ಲಿ ಅಗರ್ವಾಲ್​ಗಳು (ಮಹಾರಾಜ ಅಗ್ರಸೇನನ ಅನುಯಾಯಿಗಳು) ಇದ್ದಾರೆ. ಹಾಗಾಗಿ ಆಗ್ರಾ ನಗರದ ಹೆಸರನ್ನು 'ಅಗ್ರವನ್​' ಎಂದು ಬದಲಿಸುವಂತೆ ಮನವಿ ಮಾಡಿದ್ದಾರೆ. ಮಹಾಭಾರತದಲ್ಲೂ ಈ ಪ್ರದೇಶವನ್ನು ಅಗ್ರವನ ಎಂದು ಉಲ್ಲೇಖಿಸಲಾಗಿದೆ. ಕಾಲಾನಂತರದಲ್ಲಿ ಈ ಹೆಸರು ಅಕ್ಬರಾಬಾದ್​ ಎಂದು ಬದಲಾಗಿತ್ತು. ನಂತರ ಆಗ್ರಾ ಎಂದು ಬದಲಿಸಲಾಗಿದೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಆಗ್ರಾ ನಗರದ ಹೆಸರನ್ನು ಬದಲಿಸುವಂತೆ ಮನವಿ ಮಾಡುತ್ತೇನೆ ಎಂದು ಗಾರ್ಗ್ ತಿಳಿಸಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App