facebook pixel
chevron_right Sports
transparent
ಅಂತಿಮ ಟಿ20ಗೆ ಕೌಲ್ ಸೇರ್ಪಡೆ
ಪ್ರವಾಸಿ ವೆಸ್ಟ್​ಇಂಡೀಸ್ ತಂಡದ ಎದುರಿನ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಅಲ್ಪ ಬದಲಾವಣೆಯಾಗಿದೆ. ಪ್ರಮುಖ ವೇಗಿ ಜಸ್​ಪ್ರೀತ್ ಬುಮ್ರಾ, ಉಮೇಶ್ ಯಾದವ್ ಹಾಗೂ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್​ಗೆ ವಿಶ್ರಾಂತಿ ನೀಡಲಾಗಿದೆ. ಬುಮ್ರಾ ಅವರ ಸ್ಥಾನಕ್ಕೆ ವೇಗಿ ಸಿದ್ಧಾರ್ಥ್ ಕೌಲ್​ರನ್ನು ತಂಡಕ್ಕೆ ಸೇರಿಸಲಾಗಿದೆ. ನವೆಂಬರ್ 21ರಿಂದ ಆಸ್ಟ್ರೇಲಿಯಾ ಪ್ರವಾಸದ ಟಿ20, ಏಕದಿನ ಮತ್ತು ಟೆಸ್ಟ್ ಸರಣಿಗೆ ಜಸ್​ಪ್ರೀತ್ ಬುಮ್ರಾ, ಕುಲದೀಪ್ ಮತ್ತು ಉಮೇಶ್ ಯಾದವ್ ಸಂಪೂರ್ಣವಾಗಿ ಫಿಟ್ ಆಗಿ ಕಣಕ್ಕಿಳಿಯುವ ಉದ್ದೇಶದಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಟೀಮ್ ಮ್ಯಾನೇಜ್​ವೆುಂಟ್ ತಿಳಿಸಿದೆ. ಸರಣಿಯನ್ನು ರೋಹಿತ್ ಶರ್ಮ ಪಡೆ ಈಗಾಗಲೆ 2-0ಯ ಮುನ್ನಡೆಯೊಂದಿಗೆ ಗೆದ್ದಿದ್ದು, ಅಂತಿಮ ಪಂದ್ಯ ಭಾನುವಾರ ಚೆನ್ನೈಯ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
For the best experience use Awesummly app on your Android phone
Awesummly Chrome Extension Awesummly Android App