facebook pixel
chevron_right Health
transparent
ಹುಣಸೆಸೊಪ್ಪಿನ ಗುಣಗಳು
ನಾವು ದಿನನಿತ್ಯದಲ್ಲಿ ಬಳಸುವ ಪದಾರ್ಥಗಳಲ್ಲೊಂದು ಹುಣಸೆಹಣ್ಣು. ಅದರ ಬಗೆಗೆ ನಮಗೆ ತಿಳಿದೇ ಇದೆ. ಹುಣಸೆಎಲೆಯೂ ಸಹ ಹೆಚ್ಚಿನ ಆರೋಗ್ಯಸಹಕಾರಿ ಗುಣಗಳನ್ನು ಹೊಂದಿರುವ ಪದಾರ್ಥ. ಭಾರತದಲ್ಲಿ ಇಮ್ಲಿ ಪತ್ತಾ ಎಂಬುದಾಗಿಯೇ ಪ್ರಖ್ಯಾತವಾಗಿರುವ ಎಲೆಗಳಿವು. ಸ್ವಲ್ಪ ಹುಳಿಯಾದಂತಹ ರುಚಿ ಹೊಂದಿರುತ್ತವೆ. ವಸಂತಮಾಸದಲ್ಲಿ ಚೆನ್ನಾಗಿರುವಂತಹ ಹುಣಸೆಎಲೆಯು ನಮಗೆ ಲಭ್ಯವಾಗುತ್ತದೆ. ಆದರೆ ವರ್ಷಪೂರ್ತಿ ಇದರ ಬಳಕೆಯ ಆವಶ್ಯಕತೆಯಿದೆ ಎಂದಾದಲ್ಲಿ ಒಣಗಿಸಿ ಇಟ್ಟಿರುವ ಎಲೆಗಳು ಮಾರುಕಟ್ಟೆಯಲ್ಲಿ ಲಭ್ಯ. ಇಲ್ಲದಿದ್ದಲ್ಲಿ ನಾವೇ ಒಣಗಿಸಿ ಶೇಖರಿಸಿಟ್ಟು ಕೊಳ್ಳಬಹುದು. ಹುಣಸೆಎಲೆಯಲ್ಲಿ ಟಾರ್ಟಾರಿಕ್ ಆಮ್ಲ ಇರುವುದರಿಂದ ಸ್ವಲ್ಪ ಚೊಗರು ರುಚಿಯನ್ನು ಹೊಂದಿರುತ್ತದೆ. ವಿಟಮಿನ್ 'ಸಿ'ಯಿಂದ ತುಂಬಿರುವಂತಹ ಪದಾರ್ಥ ಇದು. ಉತ್ತಮ ಪ್ರಮಾಣದಲ್ಲಿ ನಾರಿನಂಶ, ಪೊಟ್ಯಾಷಿಯಂ, ಕಬ್ಬಿಣ ಮತ್ತು ಕ್ಯಾಲ್ಶಿಯಂ ಅಂಶವನ್ನು ಸಹ ಹೊಂದಿರುತ್ತದೆ. ಸಂದುನೋವು ನಿವಾರಣೆಯಲ್ಲಿ ಹುಣಸೆಸೊಪ್ಪು ಅತ್ಯುತ್ತಮ ಪರಿಣಾಮವನ್ನು ಬೀರಬಲ್ಲದು. ಇದರಲ್ಲಿ ಆಂಟಿ-ಇನ್​ಪ್ಲಮೇಟರಿ ಗುಣಗಳು ಉರಿಯೂತವನ್ನು ಕಡಿಮೆ ಮಾಡಬಲ್ಲವು.
For the best experience use Awesummly app on your Android phone
Awesummly Chrome Extension Awesummly Android App