facebook pixel
chevron_right Politics
transparent
'ನಕ್ಸಲವಾದವನ್ನು ಬೆಂಬಲಿಸುವವರಿಂದ ಛತ್ತೀಸ್ ಘಡ ಉದ್ಧಾರವಾಗುವುದಿಲ್ಲ'
ರಾಯ್ ಪುರ (ಛತ್ತೀಸ್ ಘಡ), ನವೆಂಬರ್ 10 : ಯಾವ ಪಕ್ಷಕ್ಕೆ ನಕ್ಸಲವಾದದಲ್ಲಿ ಕ್ರಾಂತಿ ಕಾಣಿಸುತ್ತದೆಯೋ ಅಂಥ ಪಕ್ಷ ಛತ್ತೀಸ್ ಘಡದ ಅಭಿವೃದ್ಧಿಯನ್ನು ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು 'ನಗರ ನಕ್ಸಲ'ರನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಜರಿದಿದ್ದಾರೆ. ಛತ್ತೀಸ್ ಘಡದ ರಾಯ್ ಪುರದಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಛತ್ತೀಸ್ ಘಡದ ಮುಖ್ಯಮಂತ್ರಿ ರಮಣ್ ಸಿಂಗ್ ಮುಂತಾದವರಿದ್ದರು. ಛತ್ತೀಸ್ ಘಡದಲ್ಲಿ ನವೆಂಬರ್ 12, ಸೋಮವಾರದಂದು ಒಂದೇ ಹಂತದಲ್ಲಿ ವಿಧಾನಸಭೆಗೆ ಮತದಾನ ನಡೆಯುತ್ತಿದ್ದು, ಡಿಸೆಂಬರ್ 11ರಂದು ಫಲಿತಾಂಶ ಹೊರಬೀಳಲಿದೆ. 90 ಸೀಟುಗಳಿರುವ ವಿಧಾನಸಭೆಯಲ್ಲಿ ಬಹುಮತ ಗಳಿಸಲು 46 ಸೀಟುಗಳ ಅಗತ್ಯವಿದೆ.
For the best experience use Awesummly app on your Android phone
Awesummly Chrome Extension Awesummly Android App