facebook pixel
chevron_right Technology
transparent
ಗೂಗಲ್, ಯೂಟ್ಯೂಬ್‌ನಲ್ಲಿ 'ಕೆಜಿಎಫ್' ಹವಾ!..ಟ್ರೈಲರ್‌ಗೆ ವಿಶ್ವವೇ ಫಿದಾ!!
ಕನ್ನಡಿಗರೇ ಊಹಿಸದ ರೀತಿಯಲ್ಲಿ ಕನ್ನಡ ಸಿನಿಮಾದ ಒಂದು ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿದೆ. ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಕೆಜಿಎಫ್' ಚಿತ್ರದ ಟ್ರೈಲರ್ ಬಿಡುಗಡೆಯಾದ ಕೇವಲ 24 ಗಂಟೆಗಳ ಒಳಗಾಗಿ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದ್ದು, ಯೂಟ್ಯೂಬ್ ಮೂಲಕ ವಿಶ್ವ ಸಿನಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಹೌದು, ಕನ್ನಡ, ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗಿರುವ 'ಕೆಜಿಎಫ್' ಸಿನಿಮಾ ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಯೂಟ್ಯೂಬ್‌ನ ಟ್ರೆಂಡ್ ವಿಡಿಯೋಗಳಲ್ಲಿ ತೆಲುಗು ಅವತರಣಿಕೆಯ ಸಿನಿಮಾ ಕೆಜಿಎಫ್ ಮೊದಲ ಸ್ಥಾನದಲ್ಲಿದ್ದರೆ, ಹಿಂದಿ ಭಾಷೆಯಲ್ಲಿ 5 ಮಿಲಿಯನ್ ವೀಕ್ಷಣೆ ಪಡೆಯುವತ್ತ ಮುನ್ನುಗುತ್ತಿದೆ.
For the best experience use Awesummly app on your Android phone
Awesummly Chrome Extension Awesummly Android App