facebook pixel
chevron_right Top
transparent
ಟಿಪ್ಪು ಜಯಂತಿಗೆ ವಿರೋಧ: ಸಿಟಿ ರವಿ, ಬೋಪಯ್ಯ ಸೇರಿ ಹಲವೆಡೆ ಪ್ರತಿಭಟನಾಕಾರರು ವಶಕ್ಕೆ
ಭಾರಿ ವಿವಾದಕ್ಕೆ ಕಾರಣವಾಗಿರುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿರೋಧಿಸಿ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಹಲವೆಡೆ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಇದುವರೆಗೂ ಪ್ರತಿಭಟನೆಗೆ ಮುಂದಾಗಿದ್ದ ಒಟ್ಟು 184 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಮಡಿಕೇರಿಯಲ್ಲಿ 80 ರಿಂದ 100 ಜನ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ವಿರಾಜಪೇಟೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ವಶಕ್ಕೆ ಪಡೆಯಲಾಗಿದೆ. 150ಕ್ಕೂ ಹೆಚ್ಚು ಜನ ಚೆಕ್‌ ಪೋಸ್ಟ್, ಸೂಕ್ಷ್ಮ ಜಾಗದಲ್ಲಿ ಬಂದೋಬಸ್ತ್ ಮುಂದುವರಿಸಿದ್ದೇವೆ ಎಂದು ದಿಗ್ವಿಜಯ ನ್ಯೂಸ್‌ಗೆ ಐಜಿಪಿ ಶತ್‌ ಚಂದ್ರ ಹೇಳಿದ್ದಾರೆ. ವೀರಾಜಪೇಟೆಯ ಮಿನಿವಿಧಾನಸೌಧದಲ್ಲಿ ನಡೆಯುತ್ತಿದ್ದ ಟಿಪ್ಪು ಜಯಂತಿ ಕಾರ್ಯಕ್ರಮ ಕೇವಲ ನಾಡಗೀತೆಗೆ ಸೀಮಿತವಾಯಿತು.
For the best experience use Awesummly app on your Android phone
Awesummly Chrome Extension Awesummly Android App