facebook pixel
chevron_right Entertainment
transparent
ಜಗತ್ ಕಿಲಾಡಿಯ ಚಾಲಾಕಿ ಆಟ
ರಾಮಸುತ ಬೆಂಗಳೂರು ಸಮಾಜದಲ್ಲಿ ಮೋಸ ಹೋಗುವವರು ಇರುವ ತನಕ, ಮೋಸ ಮಾಡುವವರು ಇದ್ದೇ ಇರುತ್ತಾರೆ. ಹಾಗೇ ಮೋಸ ಹೋಗುವವರ ಮತ್ತು ಬೆಣ್ಣೆಯಲ್ಲಿ ಕೂದಲು ತೆಗೆದಷ್ಟೇ ಸಲೀಸಾಗಿ ಮೋಸ ಮಾಡುವ ಚಾಲಾಕಿಯ ಕಥೆಯೇ ಜಗತ್ ಕಿಲಾಡಿ. ಹಸಿವು ಮತ್ತು ಬಡತನ ಹೇಗೆ ಒಬ್ಬ ವ್ಯಕ್ತಿಯನ್ನು ಒತ್ತಡಕ್ಕೆ ಸಿಲುಕಿಸಿ ವಂಚನೆ ಮಾಡುವಂತೆ ಪ್ರೇರೇಪಿಸುತ್ತದೆ ಎಂಬುದನ್ನು ನಿರ್ದೇಶಕ ಅರವ್ ಕಟ್ಟಿಕೊಟ್ಟಿದ್ದಾರೆ. ತಮಿಳಿನ 'ಚದುರಂಗ ವೇಟ್ಟೈ' ಸಿನಿಮಾದ ರಿಮೇಕ್ ಆಗಿರುವ 'ಜಗತ್ ಕಿಲಾಡಿ' ಕನ್ನಡದ ನೇಟಿವಿಟಿಗೂ ಹೊಂದಿಕೊಂಡಿದ್ದಾನೆ. ಬಡತನದ ಕಾರಣದಿಂದ ಚಿಕ್ಕ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡ ಸತ್ಯಮೂರ್ತಿ (ನಿರಂಜನ್), ಹಣದ ಹಿಂದೆ ಬೀಳುತ್ತಾನೆ. ದುಡ್ಡೇ ದೊಡ್ಡಪ್ಪ ಎಂದುಕೊಂಡು ಕೋಟಿ ಕೋಟಿ ಹಣವನ್ನು ವಾಮಮಾರ್ಗದಿಂದ ಚಿಟಿಕೆ ಹೊಡೆಯುವುದರಲ್ಲಿ ಗಳಿಸುತ್ತಾನೆ. ಆದರೆ, ಬದುಕಿಗೆ ದುಡ್ಡೇ ಮುಖ್ಯವಲ್ಲ ಎಂಬ ಸತ್ಯ ಅರಿವಾಗುವುದರೊಳಗೆ ಆತನೇ ಸೃಷ್ಟಿಸಿದ ಜಾಲದೊಳಗೆ ಬಂಧಿಯಾಗುತ್ತಾನೆ.
For the best experience use Awesummly app on your Android phone
Awesummly Chrome Extension Awesummly Android App