facebook pixel
chevron_right Top
transparent
ಪರರ ವಸ್ತುಗಳಿಂದ ಮೆಟ್ರೋಗೆ ಲಾಭ
ಅಭಿಲಾಷ್ ಪಿಲಿಕೂಡ್ಲು ಬೆಂಗಳೂರು ಮೆಟ್ರೋ ನಿಲ್ದಾಣ ಹಾಗೂ ರೈಲುಗಳಲ್ಲಿ ಪ್ರಯಾಣಿಕರು ಮರೆತುಹೋದ ಮತ್ತು ಕಳೆದುಕೊಂಡ ವಸ್ತುಗಳನ್ನು ಬಿಎಂಆರ್​ಸಿಎಲ್ ಹರಾಜು ಹಾಕಿದ್ದು, 2.74 ಲಕ್ಷ ರೂ. ಮೊದಲನೇ ಹಂತ ಸಂಚಾರಮುಕ್ತವಾದ ಬಳಿಕ ದಿನೇದಿನೆ ಸಾವಿರಾರು ಹೊಸ ಪ್ರಯಾಣಿಕರನ್ನು ಮೆಟ್ರೋ ಸೆಳೆಯುತ್ತಿದೆ. ಪ್ರಯಾಣಿಕರ ಸಂಖ್ಯೆ ಪ್ರತಿನಿತ್ಯ 4 ಲಕ್ಷ ದಾಟುತ್ತಿದೆ. ರೈಲಿನೊಳಗಿನ ದಟ್ಟಣೆ, ಕಚೇರಿಗೆ ಹೋಗುವ ಗಡಿಬಿಡಿ ಕಾರಣದಿಂದ ಪ್ರಯಾಣಿಕರು ಒಂದಲ್ಲ ಒಂದು ವಸ್ತು ಮರೆತು ಹೋಗುತ್ತಿದ್ದಾರೆ ಅಥವಾ ಕಳೆದುಕೊಳ್ಳುತ್ತಿದ್ದಾರೆ. ಒಟ್ಟಾರೆ ಕಳೆದ 4 ವರ್ಷಗಳಲ್ಲಿ 3,072 ವಸ್ತುಗಳನ್ನು ಮೆಟ್ರೋ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ನಿಲ್ದಾಣಗಳಲ್ಲಿ ಪತ್ತೆಯಾದ ವಸ್ತುಗಳನ್ನು ಸಿಬ್ಬಂದಿ ಆಯಾ ನಿಲ್ದಾಣ ನಿಯಂತ್ರಕರಿಗೆ ಒಪ್ಪಿಸುತ್ತಾರೆ. ರೈಲುಗಳು ಕೊನೆಯ ನಿಲ್ದಾಣ ತಲುಪಿದಾಗ ಸ್ವಚ್ಛತಾ ಸಿಬ್ಬಂದಿ ರೈಲು ಹತ್ತುತ್ತಾರೆ. ಇವರಿಗೆ ದೊರೆತ ವಸ್ತುಗಳನ್ನು ಆ ನಿಲ್ದಾಣಗಳಲ್ಲೇ ಇರಿಸ ಲಾಗುತ್ತಿದೆ.
For the best experience use Awesummly app on your Android phone
Awesummly Chrome Extension Awesummly Android App