facebook pixel
chevron_right Top
transparent
ಶಶಿಕಲಾ-ದಿನಕರನ್ ಭೇಟಿ
ಭ್ರಷ್ಟಾಚಾರ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾ ಅವರನ್ನು ಎಎಂಎಂಕೆ ಪಕ್ಷದ ಮುಖಂಡ ಟಿಟಿವಿ ದಿನಕರನ್ ಶುಕ್ರವಾರ ಭೇಟಿ ಮಾಡಿದರು. ಕಾರಾಗೃಹಕ್ಕೆ ಬಂದ ದಿನಕರನ್ ಅವರು ಶಶಿಕಲಾ ಜತೆ ರಾಜಕೀಯ ವಿಚಾರವಾಗಿ ಕೆಲ ಕಾಲ ರ್ಚಚಿಸಿದರು. ದಿನಕರನ್ ಜತೆ ಆಗಮಿಸಿದ್ದ ಶಾಸಕರಾದ ಕಲೈಚಲ್ವನ್, ರತಿನಾ ಸಭಾಪತಿ ಮತ್ತು ಅನರ್ಹಗೊಂಡ ಶಾಸಕರಾದ ಪಳನಿಯಪ್ಪನ್, ಸೆಂದಿಲ್ ಬಾಲಾಜಿ, ಸುಂದರ್ ರಾಜನ್ ಸೇರಿ 12 ಮಂದಿ ಶಶಿಕಲಾ ಜತೆ ಮಾತುಕತೆ ನಡೆಸಿದರು. ಮುಂದಿನ ದಿನಗಳಲ್ಲಿ ಉಪ ಚುನಾವಣೆಯನ್ನು ಯಾವ ರೀತಿಯಾಗಿ ಎದುರಿಸುವುದು ಎಂಬ ಬಗ್ಗೆಯೂ ಶಶಿಕಲಾ ಅಭಿಪ್ರಾಯ ಕೇಳಿ, ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
For the best experience use Awesummly app on your Android phone
Awesummly Chrome Extension Awesummly Android App