facebook pixel
chevron_right Technology
transparent
'ಡೆಬಿಟ್ ಕಾರ್ಡ್' ಬದಲಾಯಿಸಿ ಎಂಬ ಸಂದೇಶ ಬಂದರೆ ನಿರ್ಲಕ್ಷಿಸಬೇಡಿ!..ಇಲ್ಲಿ ನೋಡಿ!!
ಹಳೆಯ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳಿ ಎಂದು ಪದೇ ಪದೇ ಬ್ಯಾಂಕ್ ಸಂದೇಶಗಳು ಮೊಬೈಲ್‌ಗೆ ಬರುತ್ತಿದ್ದರೆ ನಿರ್ಲಕ್ಷಿಸಬೇಡಿ. ಏಕೆಂದರೆ, ಡಿಸೆಂಬರ್ 31ರ ನಂತರ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡು ಅಂತ್ಯವಾಗಬಹುದು. ಹಾಗಾಗಿ, ನೀವು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬದಲಾವಣೆ ಅನವಶ್ಯಕ ಮೆಸೇಜ್ ಎಂದು ತಳ್ಳಿಹಾಕುವಂತಿಲ್ಲ. ಹೌದು, ಇದು ಮುಖ್ಯ ಸಂದೇಶವಾಗಿದ್ದು, ನಿಮ್ಮಲ್ಲಿ ಚಿಪ್ ಆಧಾರಿತ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳಿಲ್ಲದಿದ್ದರೆ ಅಥವಾ ಹಳೆಯ ಕಾರ್ಡುಗಳನ್ನು ಹೊಂದಿದ್ದರೆ ಅದು ಡಿಸೆಂಬರ್ 31ರವರೆಗೆ ಮಾತ್ರ ಮೌಲ್ಯವನ್ನು ಹೊಂದಿರುತ್ತದೆ. ಹಾಗಾಗಿ, ಅಂತಹ ಕಾರ್ಡುಗಳನ್ನು ಈ ವರ್ಷದ ಅಂತ್ಯದೊಳಗೆ ಹೊಸ ಕಾರ್ಡುಗಳಿಗೆ ಬದಲಾಯಿಸಿಕೊಳ್ಳಲೇಬೇಕಿದೆ ಎಂದು ಬ್ಯಾಂಕ್‌ಗಳು ತಿಳಿಸಿವೆ. ಹಣ ಪಡೆಯುವುದಕ್ಕೆ, ವಸ್ತುಗಳನ್ನು ಖರೀದಿಸುವುದಕ್ಕೆ ಸೇರಿದಂತೆ ಬಿಟ್ ಕಾರ್ಡ್‌ ಕೂಡ ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿದೆ.
For the best experience use Awesummly app on your Android phone
Awesummly Chrome Extension Awesummly Android App