facebook pixel
chevron_right Business
transparent
ಆರ್‌ಬಿಐ Vs ಕೇಂದ್ರ ಸರ್ಕಾರದ ಜಟಾಪಟಿಗೆ ಕಾರಣಗಳೇನು? ಈ 10 ಸಂಗತಿ ತಿಳಿದಿರಲಿ..
ಆರ್‌ಬಿಐ ಗವರ್ನರ್ ಆಗಿದ್ದ ರಘುರಾಮ ರಾಜನ್ ಅವರು 2016 ರಲ್ಲಿ ಹುದ್ದೆಯಿಂದ ನಿರ್ಗಮಿಸಿದ ನಂತರ ಡೆಪ್ಯುಟಿ ಗವರ್ನರ್ ಆಗಿದ್ದ ಉರ್ಜಿತ್ ಪಟೇಲ್ ಆರ್ಬಿಐ ಗವರ್ನರ್ ಆಗಿ ಬಡ್ತಿ ಪಡೆದರು. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಹಾಗೂ ಆರ್ಬಿಐ ಮಧ್ಯದ ಜಟಾಪಟಿ ಮುಗಿದೇ ಹೋಯಿತು ಎಂಬ ಭಾವನೆ ಎಲ್ಲೆಡೆ ಮೂಡಿತ್ತು. ನಂತರ 2016ರ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಕೈಗೊಂಡ ನೋಟ್ ಬ್ಯಾನ್ ಕ್ರಮಕ್ಕೆ ಗವರ್ನರ್ ಉರ್ಜಿತ್ ಪಟೇಲ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದಾಗ ಕೇಂದ್ರ ಹಾಗೂ ಆರ್ಬಿಐ ಮಧ್ಯದ ಭಿನ್ನಾಭಿಪ್ರಾಯಗಳು ಸಂಪೂರ್ಣವಾಗಿ ಬಗೆ ಹರಿದಿವೆ ಎಂಬ ನಂಬಿಕೆ ಎಲ್ಲೆಡೆ ಮನೆ ಮಾಡಿತ್ತು. ಅದಾಗಿ ಎರಡು ವರ್ಷಗಳೇ ಕಳೆದು ಹೋಗಿವೆ.
For the best experience use Awesummly app on your Android phone
Awesummly Chrome Extension Awesummly Android App