facebook pixel
chevron_right Top
transparent
ತಂದೆಯನ್ನು ಬೀದಿಗೆ ತಳ್ಳಿದ ಮಕ್ಕಳಿಗೆ ತರಾಟೆ
ತಂದೆಯ ಆಸ್ತಿ ಕಬಳಿಸಿ ಬೀದಿಗೆ ತಳ್ಳಿದ್ದ ಮಕ್ಕಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್, ವಾರದಲ್ಲಿ ತಂದೆಗೆ ಆಸ್ತಿ ವಾಪಸ್ ಕೊಡಿಸುವಂತೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಾಕೀತು ಮಾಡಿದೆ. ಮಕ್ಕಳ ವಶದಲ್ಲಿರುವ ತಮ್ಮ ಆಸ್ತಿಯನ್ನು ಹಿಂದಿರುಗಿಸಲು ಹಾಗೂ ತಮಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮಂಡ್ಯ ಉಪ ವಿಭಾಗಾಧಿಕಾರಿ ಹೊರಡಿಸಿರುವ ಆದೇಶ ಪಾಲಿಸಲು ಕೆ.ಎಂ. ದೊಡ್ಡಿ ಠಾಣಾ ಪೊಲೀಸರಿಗೆ ನಿರ್ದೇಶಿಸಬೇಕೆಂದು ಕೋರಿ ಮದ್ದೂರು ತಾಲೂಕು ಸಿ.ಎ. ಕೆರೆ ಹೋಬಳಿಯ ಅಣ್ಣೂರಿನ 71 ವರ್ಷದ ಪಟೇಲ್ ಶಿವಲಿಂಗೇಗೌಡ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಪೀಠ, ಅರ್ಜಿದಾರರ ಮಕ್ಕಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಮಾರಾಟ ಮಾಡುವಂತಿಲ್ಲ: ಅರ್ಜಿದಾರ ತಂದೆಯ ದುಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಶಿವಲಿಂಗೇಗೌಡ ಸ್ವಯಾರ್ಜಿತ ಆಸ್ತಿ ಅನುಭವಿಸಲು ಸ್ವತಂತ್ರರು.
For the best experience use Awesummly app on your Android phone
Awesummly Chrome Extension Awesummly Android App