facebook pixel
chevron_right Sports
transparent
ಐಪಿಎಲ್ ಆರಂಭ ದಿನಾಂಕ ಬದಲು?
ಪ್ರತಿಷ್ಠಿತ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗಾಗಿ ಆಟಗಾರರಿಗೆ ವಿಶ್ರಾಂತಿ ನೀಡುವ ದೃಷ್ಟಿಯಿಂದ ಬಹುನಿರೀಕ್ಷಿತ 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 23 ರಿಂದ ಆರಂಭಗೊಳ್ಳುವ ನಿರೀಕ್ಷೆ ಇದೆ. ಮೇ 30 ರಿಂದ ಇಂಗ್ಲೆಂಡ್​ನಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ವಿಶ್ವಕಪ್ ಹಿತದೃಷ್ಟಿಯಿಂದ ವೇಗಿಗಳಿಗೆ ಐಪಿಎಲ್ ವೇಳೆ ವಿಶ್ರಾಂತಿ ನೀಡಬೇಕೆಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಕಳೆದ ತಿಂಗಳು ಆಡಳಿತಾಧಿಕಾರಿ ಸಮಿತಿ (ಸಿಒಎ) ಜತೆ ನಡೆದ ಸಭೆ ವೇಳೆ ಪ್ರಸ್ತಾಪಿಸಿದ್ದರು. ನವದೆಹಲಿ ಹಾಗೂ ಹೈದರಾಬಾದ್​ನಲ್ಲಿ ನಡೆದ ಸಭೆಗೆ ಏಕದಿನ ಹಾಗೂ ಟೆಸ್ಟ್ ತಂಡಗಳ ಉಪ-ನಾಯಕರುಗಳಾದ ರೋಹಿತ್ ಶರ್ಮ ಹಾಗೂ ಅಜಿಂಕ್ಯ ರಹಾನೆ, ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್ ಉಪಸ್ಥಿತರಿದ್ದರು.
For the best experience use Awesummly app on your Android phone
Awesummly Chrome Extension Awesummly Android App