facebook pixel
chevron_right Sports
transparent
ಯು ಮುಂಬಾಗೆ ಶರಣಾದ ಜೈಪುರ
ಪ್ರಮುಖ ರೈಡರ್​ಗಳಿಗೆ ವಿಶ್ರಾಂತಿ ನೀಡಿದ ಹೊರತಾಗಿಯೂ ಅಭಿಷೇಕ್ ಸಿಂಗ್ ಹಾಗೂ ದರ್ಶನ್ ಕಡಿಯನ್(10) ಸಂಘಟಿತ ರೈಡಿಂಗ್ ನಿರ್ವಹಣೆಯೊಂದಿಗೆ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್​ನಲ್ಲಿ ಸತತ 4ನೇ ಗೆಲುವು ಕಂಡಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಯು ಮುಂಬಾ 48-24ರಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಸೋಲಿಸಿತು. ಇದು ಮುಂಬಾಗೆ ಲೀಗ್​ನಲ್ಲಿ ಆಡಿದ 9 ಪಂದ್ಯಗಳಲ್ಲಿ 7ನೇ ಗೆಲುವಾದರೆ, ಜೈಪುರಕ್ಕೆ 6ನೇ ಸೋಲಾಗಿದೆ. ಸ್ಟಾರ್ ರೈಡರ್ ಸಿದ್ಧಾರ್ಥ್ ದೇಸಾಯಿ ಮತ್ತು ರೋಹಿತ್ ಬಲಿಯಾನ್ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಆದರೆ ಅಭಿಷೇಕ್ ಸಿಂಗ್ ಮತ್ತು ದರ್ಶನ್ ಪ್ರತಿಯೊಂದು ರೈಡಿಂಗ್​ನಲ್ಲಿ ಸುಲಭವಾಗಿ ಅಂಕ ತರುವ ಮೂಲಕ ಜೈಪುರವನ್ನು ಹಿಡಿತದಲ್ಲಿಟ್ಟುಕೊಂಡರು. ಇರಾನ್ ಬಲಿಷ್ಠ ಡಿಫೆಂಡರ್ ಫಜಲ್ ಅತ್ರಾಚಲಿ ಆರಂಭದಲ್ಲೆ ಅದ್ಭುತ ಟ್ಯಾಕಲ್ ಪಾಯಿಂಟ್ ಸಂಪಾದಿಸಿ ಜೈಪುರದ ಮೇಲೆ ಒತ್ತಡ ಹೇರಿದರು.
For the best experience use Awesummly app on your Android phone
Awesummly Chrome Extension Awesummly Android App