facebook pixel
chevron_right Top
transparent
ಹಾಸನಾಂಬೆ ದರ್ಶನ ಮೂರು ತಿಂಗಳು?
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ನಗರದ ಅಧಿದೇವತೆ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಶುಕ್ರವಾರ ಧಾರ್ವಿುಕ ವಿಧಿ ವಿಧಾನಗಳ ಮೂಲಕ ಮುಚ್ಚಲಾಯಿತು. ಇದೇ ವೇಳೆ, ದೇವಿ ದರ್ಶನ ಭಾಗ್ಯವನ್ನು 3 ತಿಂಗಳವರೆಗೆ ವಿಸ್ತರಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. 1ರಿಂದ 9ರ ವರೆಗೆ ದೇವಿ ಬಾಗಿಲು ತೆರೆದಿದ್ದ ಸಮಯದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನರು ದರ್ಶನ ಪಡೆದರು. ಬಲಿಪಾಡ್ಯಮಿ ಮಾರನೇ ದಿನವಾದ ಶುಕ್ರವಾರ ಮಧ್ಯಾಹ್ನ 1.20ಕ್ಕೆ ಸಂಪ್ರದಾಯದ ಪ್ರಕಾರ ದೇವಿಯ ಸನ್ನಿಧಿಯಲ್ಲಿ ಹೂ, ನೈವೇದ್ಯ ಇಟ್ಟು, ದೀಪ ಹಚ್ಚಿ ಗರ್ಭಗುಡಿ ಮುಚ್ಚಲಾಯಿತು. ದೇವಿಗೆ ಅಲಂಕರಿಸಿದ್ದ ಆಭರಣಗಳ ಉತ್ಸವದಲ್ಲಿ ದಾರಿಯುದ್ದಕ್ಕೂ ಬಿದ್ದ ಕರಿಮೆಣಸು ಸಂಗ್ರಹಕ್ಕೆ ಭಕ್ತರು ಮುಗಿಬಿದ್ದರು. ಮುಂದಿನ ವರ್ಷ ಅ.17 ರಿಂದ 29ರ ವರೆಗೆ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದಾಳೆ.
For the best experience use Awesummly app on your Android phone
Awesummly Chrome Extension Awesummly Android App