facebook pixel
chevron_right Top
transparent
ನಕ್ಸಲ್ ನಾಡಲ್ಲಿ ನಮೋ-ರಾಗಾ ವಾರ್
ಛತ್ತೀಸ್​ಗಢದಲ್ಲಿ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಎರಡು ದಿನ ಬಾಕಿ ಇರುವ ಹಿನ್ನೆಲೆ ಶುಕ್ರವಾರ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವಿನ ವಾಗ್ದಾಳಿ ಜೋರಾಗಿತ್ತು. ಇದೇ ಮೊದಲ ಬಾರಿಗೆ ಛತ್ತೀಸ್​ಗಢದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಮಾವೋವಾದಿಗಳನ್ನು ಕ್ರಾಂತಿಕಾರರು ಎಂದು ಬಿಂಬಿಸುವ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.ಮತ್ತೊಂದೆಡೆ ರಾಜ್ಯದಲ್ಲಿ ಎರಡು ದಿನಗಳ ಚುನಾವಣಾ ಪ್ರಚಾರ ನಡೆಸುತ್ತಿರುವ ರಾಹುಲ್ ಗಾಂಧಿ, ' ಕಳೆದ 15 ವರ್ಷಗಳಿಂದ ರಾಜ್ಯಕ್ಕೆ ಬಿಜೆಪಿಯು ಘೋಷಣೆಗಳನ್ನು ಮಾತ್ರ ನೀಡಿದೆ. ಕಾಂಗ್ರೆಸ್​ಗೆ ಅಧಿಕಾರ ಕೊಟ್ಟು ನೋಡಿ' ಎಂದು ಮನವಿ ಮಾಡಿದರು. ಪ್ರಧಾನಿ ಮೋದಿ ನಕ್ಸಲ್ ಪೀಡಿತ ಜಿಲ್ಲೆ ಬಿಸ್ತರ್​ನ ಜಗದಲ್ಪುರದಲ್ಲಿ ಚುನಾವಣೆ ರ‍್ಯಾಲಿ ನಡೆಸಿದರೆ, ರಾಹುಲ್ ಗಾಂಧಿ ಅವರು ರಾಜ್ಯದ ವಿವಿಧೆಡೆ ಮೂರು ರ‍್ಯಾಲಿ ನಡೆಸಿದರು.
For the best experience use Awesummly app on your Android phone
Awesummly Chrome Extension Awesummly Android App