facebook pixel
chevron_right Business
transparent
50% ಪಿಎಫ್‌ ಸದಸ್ಯರ ಕೆವೈಸಿಗಳು ಯುಎಎನ್‌ ಜತೆ ಲಿಂಕ್‌ ಆಗಿಲ್ಲ!
ತಮ್ಮ ಸಾರ್ವತ್ರಿಕ ಖಾತೆ ಸಂಖ್ಯೆ(ಯುಎನ್‌ಐ- ಯುನಿವರ್ಸಲ್‌ ಅಕೌಂಟ್‌ ನಂಬರ್‌) ಜತೆ ಶೇ.50ರಷ್ಟು ಪಿಎಫ್‌ ಸದಸ್ಯರು ಕೆವೈಸಿ ಮಾಹಿತಿಯನ್ನು ಜೋಡಣೆ ಮಾಡಿಲ್ಲ. ಹೀಗಾಗಿ ಅರ್ಧದಷ್ಟು ಪಿಎಫ್‌ ಸದಸ್ಯರು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ(ಇಪಿಎಫ್‌ಒ) ಆನ್‌ಲೈನ್‌ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ಸದಸ್ಯರಿಗೆ 12 ಅಂಕಿಗಳ ಯುಎಎನ್‌ ನೀಡುವ ಪ್ರಕ್ರಿಯೆಯನ್ನು ಇಪಿಎಫ್‌ಒ 2014ರಿಂದಲೇ ಆರಂಭಿಸಿದೆ. ನಾಲ್ಕು ವರ್ಷಗಳು ಕಳೆದರೂ ಅರ್ಧದಷ್ಟು ಸದಸ್ಯರು ತಮ್ಮ ಆಧಾರ್‌, ಬ್ಯಾಂಕ್‌ ಖಾತೆ ಸಂಖ್ಯೆ, ಪ್ಯಾನ್‌, ಮೊಬೈಲ್‌ ಸೇರಿದಂತೆ ಕೆವೈಸಿ ಮಾಹಿತಿಯನ್ನು ಯುಎಎನ್‌ ಜತೆ ಜೋಡಣೆ ಮಾಡಿಲ್ಲ. ಶೇ.100ರಷ್ಟು ಪಿಎಫ್‌ ಸದಸ್ಯರು ತಮ್ಮ ಯುಎಎನ್‌ ಜತೆ ಕೆವೈಸಿಯನ್ನು ಜೋಡಣೆ ಮಾಡಬೇಕು. ಈ ಸಂಬಂಧ ಇಪಿಎಫ್‌ಒ ವ್ಯಾಪ್ತಿಯ ಉದ್ಯೋಗದಾತರು ಕ್ರಮ ಕೈಗೊಳ್ಳಬೇಕು, ಎಂದು ಸರಕಾರ ಈ ಹಿಂದೆ ನಿರ್ದೇಶನ ನೀಡಿತ್ತು.
For the best experience use Awesummly app on your Android phone
Awesummly Chrome Extension Awesummly Android App