facebook pixel
chevron_right Top
transparent
ಹರಿಯಾಣ ವಿದ್ಯಾರ್ಥಿನಿ ಗ್ಯಾಂಗ್‌ರೇಪ್‌: ಒಬ್ಬನ ಬಂಧನ, ಉಳಿದವರಿಗಾಗಿ ಮುಂದುವರಿದ ಶೋಧ
ಮಹೇಂದ್ರಗಢ ಜಿಲ್ಲೆಯಲ್ಲಿ ನಡೆದ ಸಿಬಿಎಸ್‌ಇ ಟಾಪರ್‌ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದ ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದೆ. ಇಬ್ಬರಿಗಾಗಿ ಪೊಲೀಸರು ಭಾನುವಾರ ಹಲವಾರು ಕಡೆ ದಾಳಿ ನಡೆಸಿದರು. ಹರಿಯಾಣ, ರಾಜಸ್ಥಾನ, ದಿಲ್ಲಿ ಮತ್ತು ಇತರ ರಾಜ್ಯಗಳಲ್ಲಿ ದಾಳಿ ನಡೆದಿದ್ದು, ಹಲವಾರು ವ್ಯಕ್ತಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಯುವತಿ ವಾಸಿಸುವ ರೇವಾರಿ ಗ್ರಾಮದ ನಿವಾಸಿಗಳೇ ಆಗಿರುವ ಸೇನಾ ಯೋಧ ಪಂಕಜ್‌, ಮನೀಷ್‌ ಮತ್ತು ನಿಶು ಆರೋಪಿಗಳಾಗಿದ್ದು, ಪರಿಚಿತರೇ ಆಗಿದ್ದಾರೆ. ಘಟನೆ ನಡೆದ ದಿನದಿಂದಲೇ ನಾಪತ್ತೆಯಾಗಿದ್ದಾರೆ. ಆರೋಪಿಗಳ ತ್ವರಿತ ಪತ್ತೆಗಾಗಿ ಯುವತಿಯ ತಾಯಿ ಮತ್ತು ಇತರರು ಪೊಲೀಸರ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಸಾರ್ವಜನಿಕವಾಗಿಯೂ ಒತ್ತಡ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಸಂತ್ರಸ್ತೆಗೆ ಮೊದಲು ಚಿಕಿತ್ಸೆ ನೀಡಿದ ವೈದ್ಯ ಮತ್ತು ಕೃತ್ಯ ನಡೆದ ಜಮೀನಿನ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App