facebook pixel
chevron_right Top
transparent
ಮಾಂಗ್ಖಟ್ ಚಂಡಮಾರುತಕ್ಕೆ 60 ಮಂದಿ ಬಲಿ
ಪಿಲಿಪ್ಪೀನ್ಸ್‌, ಚೀನಾ ಮತ್ತು ಉತ್ತರ ಕೆರೊಲಿನಾದಲ್ಲಿ ಭೀಕರ ಚಂಡಮಾರುತ , ಧಾರಾಕಾರ ಮಳೆ ಮತ್ತು ಭೂಕುಸಿತದಿಂದ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಮಂಘುತ್‌ ಚಂಡಮಾರುತದ ಹೊಡೆತಕ್ಕೆ ಫಿಲಿಪ್ಪೀನ್ಸ್‌ ಹಾಗೂ ಚೀನಾ ತತ್ತರಿಸಿದ್ದು, ಫಿಲಿಪ್ಪೀನ್ಸ್‌ನಲ್ಲಿ ಚಂಡಮಾರುತಕ್ಕೆ ಕನಿಷ್ಠ 49 ಮಂದಿ ಮೃತಪಟ್ಟಿದ್ದಾರೆ. ವೇಗದಲ್ಲಿ ಬೀಸುತ್ತಿರುವ ಮಾಂಗ್ಖಟ್ ಚಂಡಮಾರುತದಿಂದ ಫಿಲಿಪ್ಪೀನ್ಸ್‌ನ ಕೃಷಿ ಭೂಮಿ ಸಂಪೂರ್ಣ ಹಾಳಾಗಿದೆ. ಧಾರಾಕಾರ ಮಳೆ ಮತ್ತು ಭೂಕುಸಿತದಿಂದ ಅನೇಕ ಮನೆಗಳು ಕುಸಿದಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ದಕ್ಷಿಣ ಹಾಂಕಾಂಗ್‌ನಲ್ಲಿ ಅನೇಕ ಮರಗಳು ಧರೆಗೆ ಉರುಳಿದ್ದು, ರಸ್ತೆಗಳು ಹಾಳಾಗಿವೆ.ಚೀನಾದಲ್ಲಿ 24.5 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ದಕ್ಷಿಣ ಗುವಾಂಗ್ಡಾಂಗ್‌ ಪ್ರಾಂತ್ಯದಲ್ಲಿ ಭೂಕುಸಿತದಿಂದ 400 ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ.
For the best experience use Awesummly app on your Android phone
Awesummly Chrome Extension Awesummly Android App