facebook pixel
chevron_right Top
transparent
ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ ಟಿ20 ಸೂತ್ರ
ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಮಿತ್ರಪಕ್ಷಗಳು ವಿವಿಧ ತಂತ್ರಕ್ಕೆ ಮುಂದಾಗಿವೆ. ಬಿಜೆಪಿಗೆ ಕಳೆದ ಬಾರಿಗಿಂತ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಈ ಬಾರಿ ಗೆಲ್ಲುವುದು ಪ್ರತಿಷ್ಟೆಯ ಸಂಗತಿಯಾಗಿದ್ದು, ಅದಕ್ಕಾಗಿ ಪಕ್ಷ ಟಿ20 ಫಾರ್ಮುಲಾ ಅಳವಡಿಕೆಗೆ ಮುಂದಾಗಿದೆ. ಟಿ20 ಫಾರ್ಮುಲಾ ಅನ್ವಯ ಬಿಜೆಪಿ ತಳಮಟ್ಟದ ಬೂತ್ ಕಾರ್ಯಕರ್ತನಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದು ತಮ್ಮ ಪ್ರದೇಶದ ಕನಿಷ್ಠ 20 ಮನೆಗಳಿಗೆ ತೆರಳಿ ಪ್ರಚಾರ ನಡೆಸಬೇಕಿದೆ. ಕೇಂದ್ರದ ನರೇಂದ್ರ ಮೋದಿ ಸರಕಾರದ ವಿವಿಧ ಯೋಜನೆಗಳು, ಫಲಶ್ರುತಿ ಮತ್ತು ಸಾಧನೆಗಳ ಬಗ್ಗೆ ಪ್ರತಿ ಮನೆಯಲ್ಲೂ ವಿವರವಾದ ಮಾಹಿತಿ ನೀಡಿ, ಅವರೊಂದಿಗೆ ವಿಚಾರ ವಿನಿಮಯ ನಡೆಸಿ ವರದಿ ಒಪ್ಪಿಸಬೇಕಿದೆ. ಇದಕ್ಕಾಗಿ ನಮೋ ಆ್ಯಪ್ ಮೂಲಕ ವ್ಯವಸ್ಥಿತವಾಗಿ ಕಾರ್ಯತಂತ್ರ ರೂಪಿಸಲು ಬಿಜೆಪಿ ಸಿದ್ಧತೆ ನಡೆಸಿದೆ.
For the best experience use Awesummly app on your Android phone
Awesummly Chrome Extension Awesummly Android App