facebook pixel
chevron_right Sports
transparent
ಕೊಹ್ಲಿ ವಿಶ್ರಾಂತಿಯಿಂದ ಬಿಸಿಸಿಐ-ಸ್ಟಾರ್ ವಾರ್!
ಬಿಡುವಿಲ್ಲದ ವೇಳಾಪಟ್ಟಿ ಹಿನ್ನಲೆಯಲ್ಲಿ ಏಷ್ಯಾ ಕಪ್‌ನಿಂದ ಟೀಮ್ ಇಂಡಿಯಾ ಖಾಯಂ ನಾಯಕ ವಿರಾಟ್ ಕೊಹ್ಲಿ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ರಾಂತಿ ಸೂಚಿಸಲಾಗಿತ್ತು. ಆದರೆ ಬಿಸಿಸಿಐ ನಿರ್ಧಾರವು ಏಷ್ಯಾ ಕಪ್ ಪ್ರಸಾರ ಹಕ್ಕನ್ನು ಹೊಂದಿರುವ ಸ್ಟಾರ್ ಸಂಸ್ಥೆಯ ಆಕ್ರೋಶಕ್ಕೆ ಕಾರಣವಾಗಿದೆ. ಆರು ತಂಡಗಳು ಭಾಗವಹಿಸುವ ಟೂರ್ನಿಯಿಂದ ವಿಶ್ವದ ಅತಿ ಬೇಡಿಕೆ ಹಾಗೂ ಜನಪ್ರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರುವುದು ಸ್ಟಾರ್ ಕೆಂಗಣ್ಣಿಗೆ ಗುರಿಯಾಗಿದೆ. ವಿರಾಟ್ ಅನುಪಸ್ಥಿತಿಯಿಂದ ಜಾಹೀರಾತು ಹಾಗೂ ಟೂರ್ನಿಯ ಒಟ್ಟು ಮೌಲ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಸ್ಟಾರ್ ಆರೋಪಿಸಿದೆ. 2016ರಲ್ಲಿ ಏಷ್ಯಾ ಕ್ರಿಕೆಟ್ ಮಂಡಳಿಯಿಂದ ಎಂಟು ವರ್ಷಗಳಿಗೆ ಏಷ್ಯಾ ಕಪ್ ಪ್ರಸಾರ ಹಕ್ಕನ್ನು ಸ್ಟಾರ್ ಪಡೆದಿತ್ತು. ಆದರೆ ಸೂಪರ್ ಸ್ಟಾರ್ ಕೊಹ್ಲಿ ವಿಶ್ರಾಂತಿ ಸೂಚಿಸುವ ಮೂಲಕ ಶ್ರೇಷ್ಠ ತಂಡವನ್ನು ಕಣಕ್ಕಿಳಿಸಿಲ್ಲ.
For the best experience use Awesummly app on your Android phone
Awesummly Chrome Extension Awesummly Android App