facebook pixel
chevron_right Politics
transparent
ಆರೆಸ್ಸೆಸ್ ಕಾರ್ಯಕರ್ತನಿಂದ ಪ್ರಧಾನಿ ಹುದ್ದೆ ತನಕ ಮೋದಿ ಬೆಳೆದದ್ದು ಹೇಗೆ?
ನರೇಂದ್ರ ಮೋದಿ ಅವರ ಜನ್ಮದಿನ ಸೆಪ್ಟೆಂಬರ್ 17ಕ್ಕೆ. ಈ ವರ್ಷ ಸೋಮವಾರದಂದು ಬಂದಿದೆ. ತಮ್ಮ ಜನ್ಮದಿನವನ್ನು ಉತ್ತರಪ್ರದೇಶದ ವಾರಾಣಸಿ ಜಿಲ್ಲೆ ಅಂದರೆ ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲಿ ಆಚರಿಸಿಕೊಳ್ಳಲಿದ್ದಾರೆ. ಶಾಲೆ ಮಕ್ಕಳ ಜತೆಗೆ ಹಾಗೂ ತಮ್ಮ ಜೀವನಾಧಾರಿತ ಸಿನಿಮಾ ನೋಡುತ್ತಾ ದಿನ ಕಳೆಯಲಿದ್ದಾರೆ. ತೀರಾ ತಳ ಮಟ್ಟದಿಂದ ಭಾರತದ ಪ್ರಧಾನಿ ಆಗುವ ತನಕ ಮೋದಿ ಬೆಳೆದು ಬಂದ ಹಾದಿ ಎಲ್ಲರಿಗೂ ಪರಿಚಿತ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಚಾರಿತ್ರಿಕ ಜಯ ಸಾಧಿಸುವುದರಲ್ಲಿ ನರೇಂದ್ರ ಮೋದಿಯವರದು ಮುಖ್ಯ ಪಾತ್ರ. ತೀರಾ ಬಡತನ ಹಿನ್ನೆಲೆಯ- ಟೀ ಮಾರುತ್ತಿದ್ದ ಹುಡುಗ ಅಭಿವೃದ್ಧಿಯ ಕನಸು ಕಾಣುವ ನಾಯಕನಾಗಿ ಬೆಳೆದ ಪರಿ ಅದ್ಭುತ. ಅಷ್ಟೇ ಅಲ್ಲ, ಬಹಳ ಸುದೀರ್ಘ ಕಾಲ, ಅಂದರೆ 12 ವರ್ಷಗಳ ಕಾಲ ಗುಜರಾತ್ ನ ಮುಖ್ಯಮಂತ್ರಿ ಆಗಿದ್ದ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ.
For the best experience use Awesummly app on your Android phone
Awesummly Chrome Extension Awesummly Android App