facebook pixel
chevron_right Top
transparent
ತಮಿಳರಂತೆ ಕನ್ನಡಿಗರು ಕೂಡ ಮೂರ್ಖರು ಎಂದಿದ್ದ ಸುಬ್ರಮಣಿಯನ್‌ ಸ್ವಾಮಿ ವಿರುದ್ಧ ಆಕ್ರೋಶ
ಹಿಂದಿ ದಿವಸ್‌ ವಿರುದ್ಧ ಪ್ರತಿಭಟಿಸಿದ ಕನ್ನಡಪರ ಹೋರಾಟಗಾರರು ಮೂರ್ಖರು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೂರ್ಖ ಕನ್ನಡ ಪರ ಹೋರಾಟಗಾರರೇ, ಹಿಂದಿ ಕೂಡ ಸಂವಿಧಾನದಲ್ಲಿನ ಒಂದು ಭಾಷೆ. ಒಂದು ವೇಳೆ ಹಿಂದಿ ಬೆಳೆಯುತ್ತದೆ ಎಂದರೆ ಅದರಿಂದ ಕನ್ನಡ ಕೆಳಗಿಳಿಯುತ್ತದೆ ಎಂದು ಅರ್ಥವಲ್ಲ. ಇವರೆಲ್ಲ ತಮಿಳುನಾಡಿನ ಹುಚ್ಚು ಜನರಿಂದ ಪ್ರಭಾವಕ್ಕೊಳಗಾಗಿದ್ದಾರೆ. ಹಿಂದಿಯನ್ನು ವಿರೋಧಿಸುವ ತಮಿಳುನಾಡು ಜನರು ಇಂದು ದೇಶಾದ್ಯಂತ ಪ್ರಯಾಣಿಸಲು ಸಾಧ್ಯವಿಲ್ಲ ಮತ್ತು ಉದ್ಯೋಗವನ್ನು ಕೂಡ ಪಡೆಯಲಾಗುವುದಿಲ್ಲ. ತಮಿಳುನಾಡು ಜನರಂತೆ ಕರ್ನಾಟಕದವರು ಕೂಡ ಮೂರ್ಖ ತಪ್ಪುಗಳನ್ನು ಪುನರಾವರ್ತಿಸಬೇಡಿ ಎಂದಿದ್ದಾರೆ. ಇನ್ನು ಸುಬ್ರಮಣಿಯನ್‌ ಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿರುವ ಕನ್ನಡಪರ ಸಂಘಟನೆಗಳು ಅವರಿಗೆ ಇನ್ಮುಂದೆ ಈ ರೀತಿಯ ಹೇಳಿಕೆಗಳನ್ನು ನೀಡದಿರುವಂತೆ ಎಚ್ಚರಿಸಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App