facebook pixel
chevron_right Top
transparent
ಮಲ್ಯ ಎಸ್ಕೇಪ್‌ ಆಗಿದ್ದು ಮೋದಿಯ ನೆಚ್ಚಿನ ಅಧಿಕಾರಿಯಿಂದ ಎಂದಿರುವ ರಾಹುಲ್‌ ಆರೋಪದಲ್ಲಿ ಹುರುಳಿಲ್ಲ
ಸಿಬಿಐನ ಜಂಟಿ ನಿರ್ದೇಶಕ ಎ.ಕೆ.ಶರ್ಮಾ ಅವರು ಲುಕ್‌ ಔಟ್‌ ನೋಟಿಸ್‌ನ್ನು ದುರ್ಬಲಗೊಳಿಸಿದ್ದರು ಮತ್ತು ಮಲ್ಯ ಅವರು ವಿದೇಶಕ್ಕೆ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದರು ಎಂದಿದ್ದ ರಾಹುಲ್‌ ಗಾಂಧಿ ಅವರನ್ನು ಸಿಬಿಐ ತರಾಟೆಗೆ ತೆಗೆದುಕೊಂಡಿದೆ. ಸಿಬಿಐ ವಕ್ತಾರ ಮಾತನಾಡಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಾಡಿರುವ ಆರೋಪಗಳು ಆಧಾರರಹಿತ. ಸಿಬಿಐನ ಹಿರಿಯ ಅಧಿಕಾರಿಯ ವಿರುದ್ಧ ಕೆಲವು ವ್ಯಕ್ತಿಗಳು ಆಧಾರವಿಲ್ಲದ ಆರೋಪಗಳನ್ನು ಮಾಡಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿಬಿಐ, ವಿಜಯ್‌ ಮಲ್ಯಾರನ್ನು ವಶಕ್ಕೆ ಪಡೆಯಲು ಮತ್ತು ಬಂಧಿಸಲು ಆ ಸಮಯದಲ್ಲಿ ಅವರ ವಿರುದ್ಧ ಸಿಬಿಐ ಬಳಿ ಸೂಕ್ತವಾದ ಆಧಾರಗಳಿಲ್ಲದ ಕಾರಣದಿಂದಾಗಿ ಅವರ ವಿರುದ್ಧದ ಎಲ್‌ಒಸಿಯನ್ನು ಬದಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮಲ್ಯ ಕುರಿತಾದ ನಿರ್ಧಾರವು ಸಿಬಿಐ ತೆಗೆದುಕೊಂಡಿರುವ ಉನ್ನತ ಮಟ್ಟದ ತೀರ್ಮಾನವಾಗಿದ್ದು, ಇದು ಕೇವಲ ಶರ್ಮಾರೊಬ್ಬರ ತೀರ್ಮಾನವಲ್ಲ ಎಂದು ಹೇಳಿದೆ.
For the best experience use Awesummly app on your Android phone
Awesummly Chrome Extension Awesummly Android App