facebook pixel
chevron_right Top
transparent
ಬಿಜೆಪಿ ಆಪರೇಷನ್‌ ಕಮಲ ಮಾಡಲ್ಲ, ಅದರ ಅಗತ್ಯವಿಲ್ಲ: ರೇಣುಕಾಚಾರ್ಯ
ಬಿಜೆಪಿ ಆಪರೇಷನ್ ಕಮಲ ಮಾಡಲ್ಲ, ಅದರ ಅವಶ್ಯಕತೆ ನಮಗಿಲ್ಲ. ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವುದು ಆಧಾರ ರಹಿತ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಈ ಬಾರಿ ಕೇವಲ 7 ಶಾಸಕರು ಬೇಕಾಗಿತ್ತು, ಆಗ ನಾವು ಆಪರೇಷನ್ ಮಾಡಬಹುದಿತ್ತು. ಹಾಗೂ ಬಿಎಸ್‌ವೈ ಸಿಎಂ ಆಗುತ್ತಿದ್ದರು. ಆದರೆ ನಾವು ಆಪರೇಷನ್ ಮಾಡಲಿಲ್ಲ. ದೇವೇಗೌಡರೇ ನೀವು ಯಾರಿಗೆ ತಾನೇ ತೊಂದರೆ ಕೊಟ್ಟಿಲ್ಲ ಹೇಳಿ? ಪಾಟೀಲ್ ಸೇರಿದಂತೆ ಎಲ್ಲ ನಾಯಕರಿಗೆ ತೊಂದರೆ ಕೊಟ್ಟಿದ್ದೀರಿ ಎಂದರು. ಬಿಎಸ್‌ವೈ ಕಲ್ಲುಬಂಡೆಯಾದರೆ, ನೀವು ಮಣ್ಣಿನ ಹುಂಡೆ. ಯಡಿಯೂರಪ್ಪ ಅವರನ್ನು ಯಾರೂ ಏನೂ ಮಾಡಲು ಆಗುವುದಿಲ್ಲ. ಯಡಿಯೂರಪ್ಪ ಅವರ ಬಗ್ಗೆ ಹಾಗೂ ಬಿಜೆಪಿ ಬಗ್ಗೆ ಮಾತನಾಡಲೂ ನಿಮಗೆ ನೈತಿಕ ಹಕ್ಕಿಲ್ಲ.
For the best experience use Awesummly app on your Android phone
Awesummly Chrome Extension Awesummly Android App