facebook pixel
chevron_right Top
transparent
ಇದೇ ಮೊದಲ ಬಾರಿಗೆ ಇಸ್ರೋದಿಂದ ರಾತ್ರಿ ವೇಳೆ ಉಪಗ್ರಹ ಉಡಾವಣೆ
ಇಸ್ರೋ ಇಂದು ರಾತ್ರಿ 10:30 ಕ್ಕೆ ಸರಿಯಾಗಿ ಮಹತ್ವದ ಉಪಗ್ರಹಗಳನ್ನು ಉಡಾವಣೆ ಮಾಡುವುದಕ್ಕೆ ಸಜ್ಜುಗೊಂಡಿದೆ. ಭೂ ವೀಕ್ಷಣೆಗಾಗಿ ಇರುವ ಬ್ರಿಟನ್ ನ ಎರಡು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಜವಾಬ್ದಾರಿಯನ್ನು ಇಸ್ರೋ ಹೊತ್ತುಕೊಂಡಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ನೆಲೆಯಿಂದಸೆಪ್ಟೆಂಬರ್ 16ರ ರಾತ್ರಿ 10:30ಕ್ಕೆ ನೋವಾಸರ್ ಮತ್ತು ಎಸ್ 1-4 ಉಡಾವಣೆ ಮಾಡಲಾಗುತ್ತದೆ. ಮಾನವಸಹಿತ ಗಗನಯಾನ ಯೋಜನೆ: ಮತ್ತೊಂದು ಸಾಧನೆಗೆ ಇಸ್ರೋ ಸಜ್ಜು ಭೂಮಿಯ ಮೇಲೆ ಕಣ್ಗಾವಲು ಇಡುವ ಹಾಗೂ ಸರ್ವೇ ಮಾಡುವ ಬ್ರಿಟನ್​ನ 2 ಉಪಗ್ರಹ ಸೇರಿದಂತೆ, ದೇಶದ ನೋವಾಸರ್​ ಮತ್ತು ಎಸ್​1-4 ಉಪಗ್ರಹಗಳನ್ನ ನಭೋಮಂಡಲಕ್ಕೆ ಸೇರಿಸಲಾಗುವುದು. ಈ ಉಪಗ್ರಹಗಳ ಒಟ್ಟಾರೆ ತೂಕ ಬರೋಬ್ಬರಿ 889 ಕೆಜಿ ಇದೆ. ನೋವಾಸರ್ ಉಪಗ್ರಹ ಇದು ಅರಣ್ಯದಲ್ಲಿ ದಾರಿಯನ್ನ ತೋರಲಿದೆ. ಅಷ್ಟೇ ಇಲ್ಲ ಇದು ಪ್ರವಾಹ ಹಾಗೂ ವಿಕೋಪಗಳನ್ನ ಮಾನಿಟರಿಂಗ್​ ಮಾಡಲಿದೆ.
For the best experience use Awesummly app on your Android phone
Awesummly Chrome Extension Awesummly Android App