facebook pixel
chevron_right Top
transparent
ಮಲ್ಯ ಸಾಲದ ಉರುಳು ಈಗ ಬ್ಯಾಂಕ್ ಅಧಿಕಾರಿಗಳ ಕೊರಳಿಗೂ ಬಿತ್ತು!
ವಿಜಯ್ ಮಲ್ಯರ ಕಿಂಗ್ ಫಿಷರ್ ಏರ್ ಲೈನ್ಸ್ ಗೆ ಸಾಲ ನೀಡುವ ವ್ಯವಹಾರದಲ್ಲಿ ಭಾಗಿಯಾಗಿದ್ದ ಹಲವು ಹಿರಿಯ ಬ್ಯಾಂಕ್ ಅಧಿಕಾರಿಗಳಿಗೆ ಕಷ್ಟ ಕಾಲ ಎದುರಿಗಿದೆ. ಏಕೆಂದರೆ, ಇನ್ನೊಂದು ತಿಂಗಳಿನಲ್ಲಿ ಸಿಬಿಐ ಸಲ್ಲಿಸಲಿರುವ ಚಾರ್ಜ್ ಶೀಟ್ ನಲ್ಲಿ ಬ್ಯಾಂಕ್ ಅಧಿಕಾರಿಗಳನ್ನೂ ಆರೋಪಿಗಳೆಂದು ಸೇರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕಿಂಗ್ ಫಿಷರ್ ಗೆ 6000 ಕೋಟಿಗೂ ಹೆಚ್ಚು ಸಾಲ ನೀಡಿರುವ ಪ್ರಕರಣದಲ್ಲಿ ಸಲ್ಲಿಕೆ ಆಗುತ್ತಿರುವ ಮೊದಲ ಚಾರ್ಜ್ ಶೀಟ್. ಸ್ಟೇಟ್ ಬ್ಯಾಂಕ್ ಇಂಡಿಯಾದ ನೇತೃತ್ವದಲ್ಲಿ ಹದಿನೇಳು ಬ್ಯಾಂಕ್ ಗಳು ಸೇರಿ ಸಾಲ ನೀಡಿದ್ದವು. ಅದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವೊಂದೇ 1600 ಕೋಟಿ ಸಾಲ ನೀಡಿತ್ತು. ವಿಜಯ್ ಮಲ್ಯ -ಜೇಟ್ಲಿ ಭೇಟಿ, ಸ್ವಾಮಿ ಹೇಳಿದ ಸತ್ಯಕಥೆ ಕಳೆದ ವರ್ಷವೇ ವಿಜಯ್ ಮಲ್ಯ ವಿರುದ್ಧ ಸಿಬಿಐ ಪ್ರತ್ಯೇಕ ಪ್ರಕರಣವೊಂದರಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ.
For the best experience use Awesummly app on your Android phone
Awesummly Chrome Extension Awesummly Android App