facebook pixel
chevron_right Top
transparent
ಎಚ್‌ಡಿಕೆ ಆದೇಶ ನೀಡಿದರೆ ಆಪರೇಷನ್‌ ಮಾಡಲು ಸಿದ್ಧ: ಜೆಡಿಎಸ್‌ ಶಾಸಕ
2008ರಲ್ಲಿ ನೀವು ಮಾಡಿರುವ ಆಪರೇಷನ್ ಸಾಕಾಗಿದೆ. ಕುಮಾರಣ್ಣ ಆದೇಶ ನೀಡಿದರೆ ನಾವು ಕೂಡ ಆಪರೇಷನ್‌ ಮಾಡಲು ತಯಾರಿದ್ದೀವಿ ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಬಿಜೆಪಿಯ ಆಪರೇಷನ್‌ ಕಮಲಕ್ಕೆ ತಿರುಗೇಟು ನೀಡಿದ್ದಾರೆ. ಬರೀ ಯಡಿಯೂರಪ್ಪ ಅವರ ಬಳಿ ಮಾತ್ರ ಅಪರೇಶನ್ ಮಾಡಲು ಜನರಿದ್ದಾರಾ. ಕುಮಾರಣ್ಣ ಆದೇಶ ಮಾಡಿದ್ರೆ ನಾವು ಆಪರೇಶನ್ ಮಾಡಲು ಈಗಲೇ ರೆಡಿ. ನಿಮಗೆ ಮಾತ್ರ ಅಲ್ಲ ಆಪರೇಶನ್ ಮಾಡಲು ಶಕ್ತಿ ಇರುವುದು ನಮಗೂ ಆಪರೇಶನ್ ಮಾಡಲು ಶಕ್ತಿಯಿದೆ. ಯಡಿಯೂರಪ್ಪನವರಿಗೆ ಆಪರೇಶನ್ ಕಮಲ ಮಾಡಲು ಅಶ್ವತ್ಥ ನಾರಾಯಣ್, ಯೋಗೀಶ್ವರ್ ಹೇಗೆ ಇದ್ದಾರೋ ಹಾಗೆ ಕುಮಾರಣ್ಣನಿಗೂ ಗೌರೀಶಂಕರ್, ಪುಟ್ಟರಾಜು, ಸಾ.ರಾ. ಮಹೇಶ್, ವಾಸಣ್ಣ ಜತೆ ಇದ್ದೀವಿ ಎಂದು ಹೇಳಿದರು. ಬಿಜೆಪಿಯ ಯಾವ ಅಪರೇಶನ್ ಕೂಡ ನಡೆಯುವುದಿಲ್ಲ. ಐದು ವರ್ಷ ಸರ್ಕಾರ ಪೂರ್ಣಗೊಳಿಸುತ್ತೇವೆ. ಶ್ರೀ ಕೃಷ್ಣ ಪರಮಾತ್ಮನಂತೆ ಜೆಡಿಎಸ್ ವರಿಷ್ಠ ದೇವೇಗೌಡರಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App