facebook pixel
chevron_right Sports
transparent
ವಿರಾಟ್ ಅನುಪಸ್ಥಿತಿಯಲ್ಲೂ ಭಾರತವೇ ಫೇವರಿಟ್: ದಾದಾ
ಯುಎಇನಲ್ಲಿ ಸಾಗುತ್ತಿರುವ ಪ್ರತಿಷ್ಠಿತ ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತವೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಟೀಮ್ ಇಂಡಿಯಾ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ಸೂಚಿಸಲಾಗಿದೆ. ಇದರಿಂದಾಗಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ ಭಾರತ ಅತ್ಯುತ್ತಮ ನಿರ್ವಹಣೆ ನೀಡದೇ ಹೋಗಿರಬಹದು. ಆದರೆ ಏಕದಿನದಲ್ಲಿ ಅಗ್ರ ತಂಡವಾಗಿದೆ. ತಂಡದಲ್ಲಿ ವಿರಾಟ್ ಇರುತ್ತಿದ್ದರೆ ಮತ್ತಷ್ಟು ಪ್ರಬಲವಾಗಿರುತ್ತಿತ್ತು. ಆದರೆ ರೋಹಿತ್ ಸಹ ಅತ್ಯುತ್ತಮ ನಾಯಕತ್ವ ದಾಖಲೆಯನ್ನು ಹೊಂದಿದ್ದಾರೆ. ಅವರೂ ಕೂಡಾ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆ ನನಗಿದೆ. ಟೀಮ್ ಇಂಡಿಯಾಗೆ ಏಷ್ಯಾ ಕಪ್ ಗೆಲ್ಲುವ ಸಾಮರ್ಥ್ಯವಿದೆ ಎಂದು ಗಂಗೂಲಿ ಸೇರಿಸಿದರು.
For the best experience use Awesummly app on your Android phone
Awesummly Chrome Extension Awesummly Android App