facebook pixel
chevron_right Sports
transparent
ಕೈ ಮುರಿದರೂ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿ ಹೃದಯ ಗೆದ್ದ ತಮೀಮ್
ಕೈ ಮುರಿದರೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ತೊಟ್ಟು ಒಂದೇ ಕೈಯಲ್ಲಿ ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್‌ ತಮೀಮ್‌ ಇಕ್ಬಾಲ್‌ ಕ್ರಿಕೆಟ್‌ ಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಏಷ್ಯಾ ಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ತಮೀಮ್ ಗಾಯಕ್ಕೊಳಗಾಗಿದ್ದರು. ಲಂಕಾ ವೇಗಿ ಎಸೆದ ಬೌನ್ಸರ್ ನೇರವಾಗಿ ತಮೀಮ್ ಕೈಗೆ ಅಪ್ಪಳಿಸಿತ್ತು. ತಕ್ಷಣವೇ ಮೈದಾನ ತೊರೆದ ತಮೀಮ್ ಮತ್ತೊಮ್ಮೆ ಕ್ರೀಸಿಗಿಳಿಯಲಿದ್ದಾರೆಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ತಂಡವು ಒಂಬತ್ತು ವಿಕೆಟುಗಳನ್ನು ಕಳೆದುಕೊಂಡಾಗ ಶತಕವೀರ ಮುಶ್ಫಿಕರ್ ರಹೀಂ ಅವರಿಗೆ ಸಾಥ್ ನೀಡಲು ಮತ್ತೆ ಕ್ರೀಸಿಗಿಳಿದ ತಮೀಮ್, ಇಡೀ ಕ್ರಿಕೆಟ್ ಪ್ರಿಯರ ಗಮನ ಸೆಳೆದರು. ಒಂದೇ ಕೈಯಲ್ಲಿ ಬ್ಯಾಟ್ ಬೀಸಿದ ತಮೀಮ್ ಬಾಂಗ್ಲಾ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದರು.
For the best experience use Awesummly app on your Android phone
Awesummly Chrome Extension Awesummly Android App