facebook pixel
chevron_right Top
transparent
ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಮೂರು ತಿಂಗಳಿಂದ ತೀವ್ರಗೊಂಡ ತನಿಖೆ
ಎರಡೂವರೆ ವರ್ಷದಿಂದ ತನಿಖೆ ಬಗ್ಗೆ ಗೊತ್ತಿರಲಿಲ್ಲ. ಮೂರು ತಿಂಗಳಿಂದ ತನಿಖೆ ಪ್ರಗತಿ ಕಂಡಿದೆ. ತನಿಖೆ ಬೇಗ ಮುಗಿಯಲಿ ಎಂಬುದು ನಮ್ಮ ಆಸೆ ಎಂದು ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಪುತ್ರ ಶ್ರೀವಿಜಯ ಹೇಳಿದ್ದಾರೆ. ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನಮ್ಮ ತಂದೆಯ ಹತ್ಯೆ ಪ್ರಕರಣಕ್ಕೆ ಇಬ್ಬರಿಗೆ ಸಿಐಡಿ ವಶಕ್ಕೆ ತೆಗೆದುಕೊಂಡಿದ್ದು, ಮಾಧ್ಯಮಗಳ ಮುಖಾಂತರ ಗೊತ್ತಾಗಿದೆ. ಕಳೆದ ಎರಡು ವರ್ಷಗಳಿಂದ ನಾವು ಎಲ್ಲ‌ ಆಸೆ ಬಿಟ್ಟು ಕುಳಿತಿದ್ದೆವು, ತನಿಖೆ ಬೇಗ ಮುಗಿಯಲಿ ಎಂಬುದು ನಮ್ಮ ಆಸೆ ಎಂದರು. ನಾವು ಬಂಧನಕ್ಕೆ ಒಳಗಾದವರ ಮುಖ ನೋಡಿಲ್ಲ. ಆದರೆ ತನಿಖೆ ನಂತರ ತೋರಿಸಬಹುದು. ಸಿಐಡಿ ಅಧಿಕಾರಿಗಳು ಏನು ಮಾಹಿತಿ ನೀಡಿಲ್ಲ. ನಮಗೆ ನ್ಯಾಯಾಂಗ ಹಾಗೂ‌ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇದೆ ಎಂದು ಹೇಳಿದರು.
For the best experience use Awesummly app on your Android phone
Awesummly Chrome Extension Awesummly Android App