facebook pixel
chevron_right Top
transparent
20 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಡಿಸಿಎಂ ಪರಂ
ಸುಮಾರು 20 ಶಾಸಕರು ಈಗಲೂ ಬಿಜೆಪಿ ಸಂಪರ್ಕದಲ್ಲೇ ಇದ್ದಾರೆ. ಈಗಾಗಲೇ 20 ಶಾಸಕರಿಗೂ ಅಡ್ವಾನ್ಸ್ ಹಣ ನೀಡಲಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್​ ಮಾಹಿತಿ ನೀಡಿದ್ದಾರೆ. ಕೆ.ಸಿ.ವೇಣುಗೋಪಾಲ್ ಮತ್ತು ಸಿದ್ದರಾಮಯ್ಯ ಮುಂದೆ ಮಾಹಿತಿ ನೀಡಿದ ಪರಂ, ಅಡ್ವಾನ್ಸ್​ ಪಡೆದಿರುವ ಶಾಸಕರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಕೆಲವು ಜೆಡಿಎಸ್ ಶಾಸಕರನ್ನು ಬಿಜೆಪಿಯವರು ಸಂಪರ್ಕಿಸಿದ್ದಾರೆ ಎಂದಿದ್ದಾರೆ. ಅತೃಪ್ತ ಶಾಸಕರ ಜತೆ ಮೊದಲು ಸಿದ್ದರಾಮಯ್ಯನವರು ಮಾತನಾಡಬೇಕು. ಕಾಂಗ್ರೆಸ್ ಶಾಸಕರನ್ನು ಕರೆದು ಭಿನ್ನಮತ ಶಮನಗೊಳಿಸಬೇಕು ಎಂದು ಸಿದ್ದರಾಮಯ್ಯ ಅವರ ಬಳಿ ಪ್ರಸ್ತಾಪ ಮಾಡಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App