facebook pixel
chevron_right Politics
transparent
ಸರ್ಕಾರಿ ಕಾರು ಬಳಕೆ ನಿಲ್ಲಿಸಿದ ರಮೇಶ್ ಜಾರಕಿಹೊಳಿ!
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರಿ ಕಾರು ಬಳಸದೇ ಖಾಸಗಿ ಕಾರಿನಲ್ಲಿ ಸಂಚಾರ ನಡೆಸುವುದು ಎಲ್ಲಿರಿಗೂ ತಿಳಿದಿದೆ. ಈಗ ಸಚಿವ ರಮೇಶ್ ಜಾರಕಿಹೊಳಿ ಸರ್ಕಾರಿ ಕಾರು ಬಳಕೆ ನಿಲ್ಲಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಹೌದು, ಸೆಪ್ಟೆಂಬರ್ 7ರಂದು ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬಣಕ್ಕೆ ಜಯಸಿಕ್ಕಿದ್ದು, ಜಾರಕಿಹೊಳಿ ಸಹೋದರರಿಗೆ ಹಿನ್ನಡೆ ಆಯಿತು. ಅಂದಿನಿಂದ ರಮೇಶ್ ಜಾರಕಿಹೊಳಿ ಸರ್ಕಾರಿ ಕಾರು ಬಳಕೆ ನಿಲ್ಲಿಸಿದ್ದಾರೆ. ಜಾರಕಿಹೊಳಿ ಸಹೋದರರು ಬಿಜೆಪಿ ಸೇರಿದರೆ ಆಗುವ 5 ಲಾಭಗಳು! ರಮೇಶ್ ಜಾರಕಿಹೊಳಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪೌರಾಡಳಿತ ಸಚಿವರು. ಸರ್ಕಾರಿಂದ ಅವರಿಗೆ ಇನ್ನೋವಾ ಕಾರು ನೀಡಲಾಗಿದೆ. ಆದರೆ, ರಮೇಶ್ ಜಾರಕಿಹೊಳಿ ಅವರು ಸೆ.7ರಿಂದ ಸರ್ಕಾರಿ ಕಾರನ್ನು ಬಳಕೆ ಮಾಡುತ್ತಿಲ್ಲ. ತಮ್ಮ ಖಾಸಗಿ ರೇಂಜ್ ರೋವರ್ ಕಾರಿನಲ್ಲಿ ರಮೇಶ್ ಜಾರಕಿಹೊಳಿ ಸಂಚಾರ ನಡೆಸುತ್ತಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App