facebook pixel
chevron_right Sports
transparent
ಚಿನ್ನಕ್ಕೆ ಮುತ್ತಿಟ್ಟ ಮೇರಿ ಕೋಮ್
ಪೊಲೆಂಡ್‌ನ ಗ್ಲಿವೈಸ್‌ನಲ್ಲಿ ಸಾಗುತ್ತಿರುವ ಮಹಿಳೆಯರಿಗಾಗಿನ 13ನೇ ಸಿಲೆಸಿಯನ್ ಓಪನ್ ಬಾಕ್ಸಿಂಗ್ ಟೂರ್ನಮೆಂಟ್‌‌ನಲ್ಲಿ ಭಾರತದ ಹಿರಿಯ ಅನುಭವಿ ಆಟಗಾರ್ತಿ ಎಂಸಿ ಮೇರಿ ಕೋಮ್ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ಮೇರಿ ಚಿನ್ನ ಗೆದ್ದ ಸಾಧನೆ ಮಾಡಿದರು. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಮೂರನೇ ಚಿನ್ನ ಗೆದ್ದರು. ಇನ್ನೊಂದೆಡೆ ಮಹಿಳೆಯರ 54 ಕೆ.ಜಿ ವಿಭಾಗದಲ್ಲಿ ಮನಿಷಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ, ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ಎಜೀರಿಮ್ ಕಸ್ಸನಾಯೇವ ವಿರುದ್ಧ 5-0 ಅಂತರದ ಭರ್ಜರಿ ಗೆಲುವು ದಾಖಲಿಸಿದರು. ಈ ಮೊದಲು ದಿಲ್ಲಿಯಲ್ಲಿ ನಡೆದ ಚೊಚ್ಚಲ ಇಂಡಿಯಾ ಓಪನ್ ಹಾಗೂ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಪದಕ ಸಾಧನೆ ಮಾಡಿದ್ದರು.
For the best experience use Awesummly app on your Android phone
Awesummly Chrome Extension Awesummly Android App