facebook pixel
chevron_right Sports
transparent
ಇಕ್ಬಾಲ್ ಬ್ಯಾಟಿಂಗ್: ಶ್ರೀಲಂಕಾ ಎದುರು ಅಮೋಘ ಶತಕ ಮುಷ್ಫಿಕರ್
ಕೈ ಮುರಿದರೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ತೊಟ್ಟು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್‌ ತಮೀಮ್‌ ಇಕ್ಬಾಲ್‌ ಕ್ರಿಕೆಟ್‌ ಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಲ್ಲಿ ನಡೆದ ಏಷ್ಯಾ ಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಮಾಜಿ ಚಾಂಪಿಯನ್ಸ್‌ ಶ್ರೀಲಂಕಾ ಎದುರು ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಬಾಂಗ್ಲಾ ತಂಡ, 49.3 ಓವರ್‌ಗಳಲ್ಲಿ 261 ರನ್‌ಗಳ ಸವಾಲಿನ ಮೊತ್ತಕ್ಕೆ ಆಲ್‌ಔಟ್‌ ಆಯಿತು. ಬಾಂಗ್ಲಾ ಪರ ಮುಷ್ಫಿಕರ್‌ ರಹೀಮ್‌, 150 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ ಒಳಗೊಂಡ ಅದ್ಭುತ ಶತಕ ದಾಖಲಿಸಿ ಮಿಂಚಿದರೆ, ಏಕದಿನ ಕ್ರಿಕೆಟ್‌ಗೆ ಮರಳಿದ ಲಂಕಾ ವೇಗಿ ಲಸಿತ್‌ ಮಾಲಿಂಗ 23ಕ್ಕೆ 4 ವಿಕೆಟ್‌ ಕಿತ್ತು ಅಬ್ಬರಿಸಿದರು.
For the best experience use Awesummly app on your Android phone
Awesummly Chrome Extension Awesummly Android App