facebook pixel
chevron_right Top
transparent
'ಹೌದು, ನಮ್ಮ ಮಗ ಸಲಿಂಗಿ, ಅವನ ಖುಷಿಯೇ ನಮಗೆ ಮುಖ್ಯ'
ವೈದ್ಯಕೀಯ ವಿದ್ಯಾರ್ಥಿ ರಾಹುಲ್ ಚೌಹಾಣ್ ಕಳೆದ ಕೆಲ ವರ್ಷಗಳ ಹಿಂದೆ ತನ್ನ ತಂದೆ-ತಾಯಿಗಳಲ್ಲಿ ತಾನೊಬ್ಬ ಸಲಿಂಗಿ ಎಂಬ ವಿಷಯವನ್ನು ಬಹಿರಂಗಪಡಿಸಿದ್ದ. ಇದನ್ನು ಕೇಳಿ ಪೋಷಕರಿಗೆ ಒಂದು ಕ್ಷಣ ಶಾಕ್ ಆಗಿದ್ದಂತೂ ನಿಜ. ಆದರೆ ತಮ್ಮ ಮಗನ ಸಂತೋಷವೇ ಮುಖ್ಯವೆಂದು ಭಾವಿಸಿದ್ದ ಅವರು ಅವನ ಬೆಂಬಲಕ್ಕೆ ನಿಂತರು. ಸುಪ್ರೀಂ ಕೋರ್ಟ್ 377ನೇ ವಿಧಿಯನ್ನು ರದ್ದುಗೊಳಿಸಿದಾಗ, ನಮ್ಮ ನಿರ್ಧಾರ ಸರಿ ಎಂದು ಖಚಿತವಾಯಿತು ಎನ್ನುತ್ತಾರೆ ಉಜ್ಜಯನಿ ಸಮೀಪದ ಗ್ರಾಮದವೊಂದರ ನಿವಾಸಿಗಳಾದ ರಾಹುಲ್ ಹೆತ್ತವರು. ಸುಪ್ರೀಂ ಕೋರ್ಟ್ ತೀರ್ಪನ್ನು ಸಂಭ್ರಮಿಸಲು ಭೋಪಾಲ್‌ನಲ್ಲಿ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ ಸಹ ರಾಹುಲ್ ಪೋಷಕರಾದ ರಾಮಕನ್ಯಾ ಮತ್ತು ಸುರೇಶ್ ಚಂದ್ರ ಚೌಹಾಣ್ ಸಹ ಪಾಲ್ಗೊಂಡಿದ್ದರು. ಇದು ದೀರ್ಘ ಮತ್ತು ಕಠಿಣ ಪಯಣವಾಗಿತ್ತು. ಏರಿಳಿತ, ಕಣ್ಣೀರು ಮತ್ತು ಖಿನ್ನತೆಯಿಂದ ತುಂಬಿತ್ತು.
For the best experience use Awesummly app on your Android phone
Awesummly Chrome Extension Awesummly Android App