facebook pixel
chevron_right Health
transparent
ಮಕ್ಕಳಲ್ಲಿ ಮಾನಸಿಕ ಆರೋಗ್ಯದ ರಕ್ಷಣೆ
ಹೆಗ್ಡೆ ನೀವು ಮಗುವಿಗೆ, 'ಐಸ್ಕ್ರೀಮ್ ಪಾರ್ಲರ್​ಗೆ ಹೋಗೋಣ' ಎಂದರೆ ಅದು ಎಷ್ಟು ಖುಷಿಪಡುತ್ತದೆ ಅಲ್ಲವೆ? ಆ ಐಸ್ಕ್ರೀಮ್ ಪಾರ್ಲರ್​ಗೆ ಹೋಗುವ ಉತ್ಸಾಹ, ಖುಷಿ ಶಾಲೆಗೆ ಹೋಗುವುದರಲ್ಲೂ ಇರಬೇಕು. ನಮಗೆ ಅಂತಹ ಶಾಲೆಗಳು ಬೇಕು. ಶಾಲೆಗಳು ಹೇಗಿರಬೇಕು ಎಂದರೆ, ಶಾಲೆಯಲ್ಲಿ ಮಗುವಿನ ಮನಸ್ಸನ್ನು ವಿಕಾಸಗೊಳಿಸುವಂತಹ ವಾತಾವರಣ ಇರಬೇಕು. ಅಲ್ಲಿ ಹೆದರಿಸುವಂತಹ ಟೀಚರ್​ಗಳು ಇರಬಾರದು. ಗದರಿಸುವವರು, ಪೆಟ್ಟು ಕೊಡುವವರು ಇರಬಾರದು. ಶಾಲೆಯಲ್ಲಿ ಅಧ್ಯಾಪಕರ ಪಾತ್ರ ಬಹಳ ಮುಖ್ಯವಾದದ್ದು. ತನಗೆ ಒಂದೇ ಮಗು ಇದ್ದರೆ ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರೀತಿಯನ್ನು ಅಧ್ಯಾಪಕರು ಶಾಲೆಯ ಪ್ರತಿಯೊಂದು ಮಗುವಿನ ಬಗೆಗೂ ತೋರಿಸಬೇಕು. ಹಾಲೆಂಡ್​ನ (ನೆದರ್ಲೆಂಡ್) ಮಾಸ್ಟ್ರಿಕ್ಟ್ ಎಂಬಲ್ಲಿ ಒಂದು ಮೆಡಿಕಲ್ ಕಾಲೇಜು ಇದೆ. ಅಲ್ಲಿ ಮೊದಲ ಎರಡು ವರ್ಷ ಪುಸ್ತಕದಲ್ಲಿ ಏನೇನು ಕಲಿಯಬೇಕೋ ಅದನ್ನೆಲ್ಲ ಕಲಿಸುತ್ತಾರೆ.
For the best experience use Awesummly app on your Android phone
Awesummly Chrome Extension Awesummly Android App