facebook pixel
chevron_right Top
transparent
ಬಿಜೆಪಿಯವರು ನನ್ನನ್ನೂ ಸಂಪರ್ಕಿಸಿದ್ದರು: ಅನ್ನದಾನಿ
ಬಿಜೆಪಿಯವರು ನನ್ನನ್ನೂ ಸಂಪರ್ಕಿಸುವ ಯತ್ನ ಮಾಡಿದ್ದರು. ಬಿಜೆಪಿ ಏನೇ ಮಾಡಿದರೂ ಸರ್ಕಾರ ಉರುಳಿಸಲಾಗದು ಎಂದು ಜೆಡಿಎಸ್​ ಶಾಸಕ ಡಾ.ಕೆ.ಅನ್ನದಾನಿ ಹೇಳಿದ್ದಾರೆ. ಮಳವಳ್ಳಿ ತಾಲೂಕಿನ ಮಾರೇಹಳ್ಳಿ ಗ್ರಾಮದಲ್ಲಿ ಮಾತನಾಡಿ, ನಾನು ಎಂ.ಎ ಪಿಎಚ್.ಡಿ ಪದವಿ ಮಾಡಿರುವವನು. ಅವರು ನನ್ನನ್ನು ಮಂತ್ರಿ ಮಾಡುತ್ತೀನಂದರೂ ನಾನು ಹೋಗುವುದಿಲ್ಲ. ನನಗೆ ಅಧಿಕಾರ, ಹಣ ಮುಖ್ಯವಲ್ಲ. ನಾನು ನನ್ನದೇ ತತ್ತ್ವಗಳಿಗಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಅಧಿಕಾರಕ್ಕಿಂತ ಪಕ್ಷ, ನಾಯಕತ್ವ ಮುಖ್ಯ ಎಂದಿದ್ದಾರೆ. ನಾನು ದೇವೇಗೌಡರ ಕುಟುಂಬಕ್ಕೆ, ಪಕ್ಷಕ್ಕೆ ನಿಷ್ಠೆ ಹೊಂದಿರುವಾತ. ನಮ್ಮ ಪಕ್ಷದ ಯಾವೊಬ್ಬ ಶಾಸಕನನ್ನು ಸೆಳೆಯಲು ಸಾಧ್ಯವಿಲ್ಲ. ಯಾವ ಜಿಲ್ಲೆಯಲ್ಲೂ ಏಳಕ್ಕೆ ಏಳಕ್ಕೆ ಏಳು ಸ್ಥಾನ ಗೆಲ್ಲಿಸಿಕೊಟ್ಟಿಲ್ಲ. ಆದರೆ ಮಂಡ್ಯದಲ್ಲಿ ಜನ ಅಧಿಕಾರ ನೀಡಿದ್ದಾರೆ. ನಾನು ಸಂಪಾದಿಸಿರುವ ವಿದ್ಯೆಯೇ ಸಾವಿರ ಕೋಟಿ ರೂ.
For the best experience use Awesummly app on your Android phone
Awesummly Chrome Extension Awesummly Android App