facebook pixel
chevron_right Top
transparent
ಭಗವಂತನ ಕೃಪೆ ಇದ್ದರೆ ನಾನು ಮುಖ್ಯಮಂತ್ರಿಯಾಗುತ್ತೇನೆ: ಡಿಕೆಶಿ
ಭಗವಂತನ ಕೃಪೆ ಇದ್ದರೆ ನಾನು ಮುಖ್ಯಮಂತ್ರಿಯಾಗುತ್ತೇನೆ, ಅದಕ್ಕೆ ಯಾವುದೇ ಅವಸರವಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಆಪರೇಷನ್​ ಲೋಟಸ್​ ಹೆಸರಿನಲ್ಲಿ ನಮ್ಮ ಶಾಸಕರನ್ನು ಸೆಳೆಯಲು ಯತ್ನಿಸಲಾಗುತ್ತಿದೆ. ಪಾಟೀಲ್​, ರಹೀಂ ಸೇರಿ 15-16 ಶಾಸಕರು, ಮಾಜಿ ಸಚಿವರನ್ನು ಸಂಪರ್ಕ ಮಾಡಿದ್ದಾರೆ. ಅರ್ಜೆಂಟ್​ ಆಗಿ ಹೋದರೆ ಅಪಘಾತವಾಗುತ್ತದೆ. ಹಾಗಾಗಿ ನಮ್ಮ ಸರ್ಕಾರ ನಿಧಾನವಾಗಿ ಹೋಗುತ್ತಿದೆ. ನಮ್ಮ ಸರ್ಕಾರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಕೆಶಿ ತಿಳಿಸಿದ್ದಾರೆ. ಗಾಣಗಾಪುರ ದತ್ತಾತ್ರೇಯ ದೇಗುಲದ ಬಗ್ಗೆ ಕೇಳಿದ್ದೆ, ಆದರೆ ಇಲ್ಲಿಗೆ ಬಂದು ದೇವ ದರ್ಶನ ಪಡೆಯುವ ಭಾಗ್ಯ ಸಿಕ್ಕಿರಲಿಲ್ಲ. ಈ ಹಿಂದೆಯೇ ಇಲ್ಲಿಗೆ ಬರಬೇಕಿತ್ತು. ಆದರೆ ಎರಡು ಮೂರು ಬಾರಿ ಇಲ್ಲಿಗೆ ಬರುವುದು ಮುಂದೆ ಹೋಗಿತ್ತು. ಈಗ ಗಾಣಗಾಪುರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದು, ಖುಷಿಯಾಗುತ್ತಿದೆ.
For the best experience use Awesummly app on your Android phone
Awesummly Chrome Extension Awesummly Android App