facebook pixel
chevron_right Top
transparent
ದೆಹಲಿಯಿಂದ ವಿಮಾನದಲ್ಲಿ ಬರ್ತಾನೆ ಈ ಹೈಫೈ ಕಳ್ಳ
ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್​ ಮಾಡಿಕೊಂಡು ಚಿನ್ನ ಬೆಳ್ಳಿ ಕಳ್ಳತನ ಮಾಡುತ್ತಿದ್ದ ಹೈಫೈ ಕಳ್ಳನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ದೆಹಲಿಯ ಚೋರ್​ ಬಜಾರ್​ನ ಅರ್ಮಾನ್ ಖಾನ್ ಎಂಬ ಖತರ್ನಾಕ್​ ಕಳ್ಳ ಓಡಾಡೋದು ವಿಮಾನದಲ್ಲಿ. ದೆಹಲಿಯಿಂದ ನೇರವಾಗಿ ಚೆನ್ನೈಗೆ ಬರುತ್ತಿದ್ದ ಈತ ಅಲ್ಲಿಂದ ಕಾರಿನಲ್ಲಿ ಬೆಂಗಳೂರು ಪಕ್ಕದ ಹೊಸೂರಿಗೆ ಬಂದು ಹೈಫೈ ರೂಮ್​ನಲ್ಲಿ ತಂಗುತ್ತಿದ್ದ. ನಂತರ ದಿನಕ್ಕೊಂದು ಏರಿಯಾ ಗುರುತಿಸಿ ಅಲ್ಲಿ ಓಡಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ. ಮೊದಲೇ ಗುರುತಿಸಿದ ಮನೆಯ ಬಳಿ ಬರುತ್ತಿದ್ದ ಆತ ಐದಾರು ಡೋರ್​ ಕಾಲಿಂಗ್​ ಬೆಲ್​ ಒತ್ತುತ್ತಿದ್ದ. ಯಾರೂ ಬಾಗಿಲು ತೆರೆಯದೆ ಇದ್ದಾಗ, ತಕ್ಷಣ ಕಾರ್ಯ ಪ್ರವೃತ್ತನಾಗುತ್ತಿದ್ದ ಈತ ಮನೆಯೊಳಗೆ ನುಸುಳಿ ಚಿನ್ನ, ಬೆಳ್ಳಿ, ಆಭರಣಗಳನ್ನು ಕಳ್ಳತನ ಮಾಡುತ್ತಿದ್ದ.
For the best experience use Awesummly app on your Android phone
Awesummly Chrome Extension Awesummly Android App