facebook pixel
chevron_right Top
transparent
ಸಿಬಿಎಸ್​ಇ ಟಾಪರ್​ ಸಾಮೂಹಿಕ ಅತ್ಯಾಚಾರ: ನಮಗೆ ನ್ಯಾಯ ಬೇಕು, ಚೆಕ್​ ಬೇಡ ಎಂದ ಸಂತ್ರಸ್ತೆ ತಾಯಿ
ಸಿಬಿಎಸ್​ಇ ಟಾಪರ್ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಗೆ ಸರ್ಕಾರ 2 ಲಕ್ಷ ರೂ. ಚೆಕ್​ ನೀಡಿದ್ದು, ಸಂತ್ರಸ್ತೆಯ ತಾಯಿ ಇದನ್ನು ನಿರಾಕರಿಸಿ, 'ನಮಗೆ ದುಡ್ಡು ಬೇಡ, ನ್ಯಾಯ ಬೇಕು' ಎಂದು ಒತ್ತಾಯಿಸಿದ್ದಾರೆ. ಸಂತ್ರಸ್ತೆಗೆ ನೀಡಿರುವ ಚೆಕ್​ ಮೇಲೆ ಮುಖ್ಯ ನ್ಯಾಯಮೂರ್ತಿ ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಕಾರ್ಯದರ್ಶಿಯ ಸಹಿ ಇರುವುದನ್ನು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ. ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂತ್ರಸ್ತೆಯ ತಾಯಿ, ನನ್ನ ಮಗಳ ಮೇಲೆ ಸಾಮೂಹಿಕ ಅತ್ಯಾಚಾರವಾದ ನಂತರ ನನ್ನ ಪತಿಗೆ 2 ಲಕ್ಷ ರೂ. ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವುದಕ್ಕೂ ಮುಂಚೆ ಈ ಚೆಕ್​ನ್ನು ನಮಗೆ ನೀಡಿದ್ದರು. ನನ್ನ ಮಗಳು ಈಗಾಗಲೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಅವಳಿಗೆ ನ್ಯಾಯ ಒದಗಿಸುವುದರ ಬದಲಿಗೆ ದುಡ್ಡು ನೀಡಿದ್ದಾರೆ. ನಮಗೆ ನಿಮ್ಮ ಚೆಕ್​ ಬೇಡ.
For the best experience use Awesummly app on your Android phone
Awesummly Chrome Extension Awesummly Android App