facebook pixel
chevron_right Politics
transparent
ಸೆ.18ರಂದು ಹೊಸ ಪಕ್ಷದ ಹೆಸರು ಘೋಷಿಸಲಿದ್ದಾರೆ ಉಪೇಂದ್ರ
ನಟ, ನಿರ್ದೇಶಕ ಉಪೇಂದ್ರ ಮತ್ತೆ ರಾಜಕೀಯಕ್ಕೆ ವಾಪಸ್ ಆಗಲಿದ್ದಾರೆ. ಸೆ.18ರಂದು ಉಪೇಂದ್ರ ನೇತೃತ್ವದ ಹೊಸ ಪಕ್ಷದ ಘೋಷಣೆಯಾಗಲಿದೆ. ಕೆಪಿಜೆಪಿ ಪಕ್ಷ ಸ್ಥಾಪನೆ ಮಾಡಿದ್ದ ಅವರು ನಂತರ ಪಕ್ಷದಿಂದ ಹೊರ ಬಂದಿದ್ದರು. ಸೆ.18ರಂದು ನಟ ಉಪೇಂದ್ರ ಅವರು ಹುಟ್ಟು ಹಬ್ಬ. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ನಿವಾಸದಲ್ಲಿ ಅವರು ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಂದು ಹೊಸ ಪಕ್ಷದ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. 'ಜನತಂತ್ರ ವ್ಯವಸ್ಥೆಗೆ ಮಾರಕವಾಗಿರುವ ಹಣಬಲ, ಜಾತಿಬಲ, ಖ್ಯಾತಿಬಲಗಳನ್ನು ಅಳಿಸಿ ಹಾಕಿ, ಸಂಪೂರ್ಣ ಪಾರದರ್ಶಕ ಆಡಳಿತ ನೀಡುವುದು ಪಕ್ಷದ ಉದ್ದೇಶ. ಉತ್ತಮ ಪ್ರಜಾಕೀಯ ವ್ಯವಸ್ಥೆಯನ್ನು ರೂಪಿಸುವುದು ನನ್ನ ಮುಂದಿನ ಗುರಿ ಎಂದು ಉಪೇಂದ್ರ ಹೇಳಿದ್ದಾರೆ. ಹೊಸ ಪಕ್ಷ ಘೋಷಣೆ ಮಾಡುವ ಉಪೇಂದ್ರ ಅವರು 2019ರ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
For the best experience use Awesummly app on your Android phone
Awesummly Chrome Extension Awesummly Android App