facebook pixel
chevron_right Top
transparent
ಶಾ ನನ್ನ ವಿರುದ್ಧ ಸ್ಪರ್ಧಿಸಲಿ ಎಂದ ಓವೈಸಿ, ನಿಮ್ಮನ್ನು ಸೋಲಿಸಲು ಸಾಮಾನ್ಯ ಕಾರ್ಯಕರ್ತ ಸಾಕು ಎಂದ ಬಿಜೆಪಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಆಲ್‌ ಇಂಡಿಯಾ ಮಜ್‌ಲಿಸ್‌ ಎ ಇತ್ತೆಹಾದ್‌ ಉಲ್‌ ಮುಸ್ಲಿಮೀನ್‌ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ. ಟಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಅಲ್ಪಸಂಖ್ಯಾತರನ್ನು ಪ್ರಚೋದಿಸುವ ಮೂಲಕ ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದ್ದು, ಗೌಪ್ಯವಾಗಿ ಆಲ್‌ ಇಂಡಿಯಾ ಮಜ್‌ಲಿಸ್‌ ಎ ಇತ್ತೆಹಾದ್‌ ಉಲ್‌ ಮುಸ್ಲಿಮೀನ್‌ (ಎಐಎಂಐಎಂ) ಜತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದ ಬೆನ್ನಲ್ಲೇ ಓವೈಸಿ ಈ ಸವಾಲು ಎಸೆದಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಈಗಿರುವ ಐದು ಸ್ಥಾನಗಳನ್ನು ಸಹ ಉಳಿಸಿಕೊಳ್ಳಲಾಗದು ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ. 'ನಿಮ್ಮ ಕಾರ್ಯತಂತ್ರವನ್ನು ಬಗ್ಗುಬಡೆಯಲು ಹೈದರಾಬಾದ್ ಹಾಗೂ ತೆಲಂಗಾಣ ಜನರು ಸಿದ್ಧರಾಗಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App